ಮೂಡುಬಿದಿರೆ: ಮಕ್ಕಳಿಗೆ ಅಂಗನವಾಡಿಗಳ ಮೂಲಕ ಪೌಷ್ಠಿಕ ಆಹಾರ, ಉತ್ತಮ ಸಂಸ್ಕಾರ ದೊರೆಯುತ್ತಿದೆ. ಕಾರ್ಯಕರ್ತೆಯರು ಮಕ್ಕಳಿಗೆ ತಾಯಿಯ ಪ್ರೀತಿ ನೀಡಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ದ.ಕ ಜಿ.ಪಂ, ಮಂಗಳೂರು ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪಡುಮರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಇತ್ತೀಚಿಗೆ ಕೇಂಪುಲು ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

kempula Anganavadi inaugruation
ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಾಥ್ ಸುವರ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗನವಾಡಿಗಳಿಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು. ಮೂಡುಬಿದಿರೆ ರೋಟರಿ ವತಿಯಂದ ಅಂಗನಾಡಿಗೆ ನೂತನ ವಾಟರ್ ಫ್ಯೂರಿಫಯರ್ ಕೊಡುಗೆಯನ್ನು ಅಧ್ಯಕ್ಷ ಡಾ.ರಮೇಶ್, ಕಾರ್ಯದರ್ಶಿ ಸಿ.ಎಚ್. ಅಬ್ದುಲ್ ಗಫೂರ್ ಹಸ್ತಾಂತರಿಸಿದರು.
ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ಪ್ರಶಾಂತ್ ಅಮೀನ್, ಮೂಲ ಭೂತ ಸೌಕರ್ಯ ಒದಗಿಸಿದ ದಯಾನಂದ ಪೈಯವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಪ್ರಶಾಂತ್ ಅಮೀನ್, ಪುರಸಭಾ ಸದಸ್ಯ ಪಿ.ಕೆ.ಥಾಮಸ್, ಪಡುಮಾರ್ನಾಡ್ ಪಂಚಾಯತ್ ಸದಸ್ಯರಾದ ದಯಾನಂದ ಪೈ, ಸೂರಜ್ ಬನ್ನಡ್ಕ, ಶೋಭಾ ದಿನೇಶ್, ಶೋಭಾ ವಸಂತ್,ಬಾಲ ವಿಕಾಸ ಸಮಿತಿ ಅಧ್ಯಕ್ಷ ಉಮೇಶ್, ಪಿಡಿಒ ರವಿ, ಕಾರ್ಯದರ್ಶಿ ಗೋಪಾಲ್, ಗ್ರಾಮ ಲೆಕ್ಕಾಧಿಕಾರಿ ಕಿಶೋರ್, , ಬಾಲಕೃಷ್ಣ ಸಾಮಾನಿ ಉಪಸ್ಥಿತರಿದ್ದರು.

ಪಂಚಾಯತ್ ಸದಸ್ಯ ಉಮೇಶ್ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಶುಭ ಕಾರ್ಯಕ್ರಮ ನಿರೂಪಿಸಿ ಅಂಗನವಾಡಿ ಕಾರ್ಯಕರ್ತೆ ಮನು ವಂದಿಸಿದರು.

By Suddi9

Leave a Reply

Your email address will not be published. Required fields are marked *