ಬಂಟ್ವಾಳ: ಇಲ್ಲಿನ ಬೈಪಾಸ್ ನಿತ್ಯಾನಂದನಗರ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟಿನ ವತಿಯಿಂದ ಪುನರ್ ನಿರ್ಮಾಣಗೊಳ್ಳಲಿರುವ ಮಂದಿರದಲ್ಲಿ ಪ್ರತಿಷ್ಠೆಗೊಳಿಸಲು ಸಿದ್ಧಗೊಳ್ಳಲಿರುವ ಸ್ವಾಮೀಜಿದ್ವಯರ ಪಂಚಲೋಹದ ವಿಗ್ರಹಕ್ಕೆ ಭಕ್ತರ ‘ಹಸ್ತಕಾಣಿಕೆ ಅಭಿಯಾನ’ ಕಾರ್ಯಕ್ರಮಕ್ಕೆ ಇದೇ 25ರಂದು ಬೆಳಿಗ್ಗೆ ಗಂಟೆ 9.30ಕ್ಕೆ ಚಾಲನೆ ಸಿಗಲಿದೆ.
ಅಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಈ ಮಹತ್ತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಒಟ್ಟು 1.8ಲಕ್ಷ ಹಸ್ತಕಾಣಿಕೆ ಅಭಿಯಾನ ಆರಂಭಿಸಲಾಗಿದೆ. ಈಗಾಗಲೇ ಮಹಾರಾಷ್ಟ್ರದ ಕುಡಾಳ್ ಎಂಬಲ್ಲಿ ವಿಗ್ರಹ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಭಕ್ತರಿಂದ ನಗದು ಸಹಿತ ಚಿನ್ನ, ಬೆಳ್ಳಿ ಮತ್ತಿತರ ಹಸ್ತಕಾಣಿಕೆ ನಿರೀಕ್ಷಿಸಲಾಗಿದೆ ಎಂದು ಸಮಿತಿ ಸಂಚಾಲಕ ಬಿ.ದಿನೇಶ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
