ಬಜಪೆ: ಹಿಂದಿನ ಕಾಲದಲ್ಲಿ ಕೂಡು ಕುಟುಂಬದ ಅವಿಭಕ್ತ ಕುಟುಂಬಗಳಲ್ಲಿಮಕ್ಕಳಿಗೆ ದೊರೆಯುತ್ತಿದ್ದ ಪ್ರೀತಿವಾತ್ಸಲ್ಯ ಸಂಭಂಧಗಳ ಅರಿವು ಇಂದಿನ ಪ್ಲಾಟ್‍ಗಳಲ್ಲಿ ವಾಸವಾಗಿರುವ ಮಕ್ಕಳಿಗೆ ದೊರೆಯುತ್ತಿಲ್ಲ. ಮಕ್ಕಳಿಗೆ ಎಳೆವೆಯಲ್ಲೆ ನಮ್ಮ ಸಂಸ್ಕೃತಿ, ಕಲೆ ಸಂಭಂಧಗಳ ಬಗ್ಗೆ ತಿಳುವಳಿಕೆ ನೀಡುವ ಅಗತ್ಯವಿದೆ ಎಂದು ಎಂಆರ್‍ಪಿಎಲ್ ನ ಸಿಎಸ್‍ಆರ್ ಮುಖ್ಯ ಪ್ರಬಂಧಕಿ ವೀಣಾ ಟಿ.ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಶುಕ್ರವಾರ ಬಜಪೆ ಪಾಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಪೌಢಶಾಲೆಯ ವಾರ್ಷಿಕೋತ್ಸವದಲ್ಲಿ ಸಮಾರಂಭದಲ್ಲಿ ಮಾತನಾಡಿದರು.

ಇಂದು ಮಕ್ಕಳಲ್ಲಿ ಹುಟ್ಟಿನಿಂದ ಬಂದಿರುವ ಪ್ರತಿಭೆಗಳನ್ನು ಗುರುತಿಸದೇ ಪೋಷಕರು ತಮ್ಮ ಆಶೆ ಆಕಾಂಕ್ಷೆಗಳನ್ನು ಈಡೇರಿಸಲು ಒತ್ತಡ ಹಾಕುತ್ತಾರೆ. ಪಕ್ಕದ ಮನೆಯವರ ಮಕ್ಕಳು ಡಾಕ್ಟರ್ ಆದರೆ ನಮ್ಮ ಮಕ್ಕಳು ಡಾಕ್ಟರ್ ಆಗಬೇಕು ಎಂಬ ಪೋಷಕರ ಹಪಾಹಪಿ ಮಕ್ಕಳ ನೈಜ ಪ್ರತಿಭೆಗಳಿಗೆ ಕಂಟಕವಾಗುತ್ತದೆ.ಎಂದು ಖ್ಯೇಧ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆಯ ಸಂಚಾಲಕ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ನ ಅಧ್ಯಕ್ಷ ಕೆ.ಕರುಣಾಕರಶೆಟ್ಟಿ ಮಾತನಾಡಿ ಶಿಕ್ಷಣ ಸಂಸ್ಥೆಯ ಯಶಸ್ವಿಗೆ ಪೋಷಕರ ಸಹಕಾರ ಕೋರಿದರು,ಪ್ರತಿಭಾವಂತ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿಅತ್ಯುತ್ತಮ ಸಾಧನೆಮಾಡಿದವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿಗೌರವಿಸಲಾಯಿತು.
ಟ್ರಸ್ಟ್‍ನ ಕಾರ್ಯದರ್ಶಿ ಗೋಪಿನಾಥ್ ಶೆಟ್ಟಿ, ಕೋಶಾಧಿಕಾರಿ ರತ್ನಕಾರ ಶೆಟ್ಟಿ, ಟ್ರಸ್ಟಿಗಳಾದ ಅರುಣ್ ಶೆಟ್ಟಿ, ಸಂಧೀಪ್‍ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಅನಿತಾ ಕೋಟ್ಯಾನ್, ಮುಖ್ಯ ಶಿಕ್ಷಕಿಶಹನ ಎಂ.ಫೆಹಲವಿ, ವಿದ್ಯಾರ್ಥಿನಾಯಕಿ ಸಹರಾಲಾಮಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಶಹನ.ಎಮ್. ಫೆಹಲವಿ ಸ್ವಾಗತಿಸಿ,ನಿರ್ಮಾಲಾ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು.ಸಿಲ್ವಿನ್ ಸಲ್ದಾನ ವಂದಿಸಿದರು.
