ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಗತ ಜನ್ಮದಲ್ಲಿ ಆಲೀಗಢದ ಮುಸ್ಲಿಂ ವಿಶ್ವವಿದ್ಯಾಲಯ ಸಂಸ್ಥಾಪಕ ಹಾಗೂ ಮುಸ್ಲಿಂ ಪ್ರತ್ಯೇಕ ರಾಷ್ಟ್ರ ಪಾಕಿಸ್ತಾನ ಸ್ಥಾಪನೆಗಾಗಿ ಪ್ರಸ್ತಾಪನೆ ಮಂಡಿಸಿದ ಮೊದಲಿಗರಾದ ಸೈಯದ್ ಅಹ್ಮದ್ ಖಾನ್ ಆಗಿದ್ರಂತೆ. ಸಂಶೋಧನೆಯೊಂದು ಹೀಗೆ ಹೇಳುತ್ತಿದೆ.
ಜ್ಞಾನಕ್ಕೆ ನಿಲುಕದ ವಿಷಯಗಳ ಬಗ್ಗೆ ಹಾಗೂ ಪುನರ್ಜನ್ಮದ ಬಗ್ಗೆ ಸಂಶೋಧನೆ ನಡೆಸುವ ಅಮೆರಿಕಾದ ಇನ್ಸ್ಟಿಟ್ಯೂಟ್ ಫಾರ್ ಇಂಟ್ರಿಗ್ರೇಷನ್ ಆಫ್ ಸೈನ್ಸ್, ಇಂಟ್ಯೂಷನ್ ಅಂಡ್ ಸ್ಪಿರಿಟ್(IISIS) ಸಂಸ್ಥೆ ಮೋದಿ ಅವರ ಹಿಂದಿನ ಜನ್ಮದ ರಹಸ್ಯವನ್ನು ಹೊರ ಹಾಕಿದೆ.
ಪುನರ್ಜನ್ಮ ಸಂಶೋಧನೆಯಲ್ಲಿ ಒಬ್ಬ ವ್ಯಕ್ತಿಯ ಹಿಂದಿನ ಜನ್ಮದ ರಹಸ್ಯ ತಿಳಿಯಲು ಕೆಲವು ವಿಧಾನಗಳನ್ನು ಈ ಸಂಸ್ಥೆ ಅನುಸರಿಸಲಾಗುತ್ತದೆ. ಪ್ರಮುಖವಾಗಿ ವ್ಯಕ್ತಿಯ ಮುಖ ಲಕ್ಷಣ, ರಾಜಕೀಯ ಬೆಳವಣಿಗೆ ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಭಗವದ್ಗೀತೆಯ ಪ್ರಕಾರ ಆತ್ಮಕ್ಕೆ ನಾಶವಿಲ್ಲದ ಕಾರಣ ಕರ್ಮಾನುಸಾರ ಮೋದಿ ಈ ಜನ್ಮದಲ್ಲಿ ಹಿಂದೂ ಆಗಿ ಹುಟ್ಟಿದ್ದಾರೆ.
ಐಐಎಸ್ಐಎಸ್ ಪ್ರಕಾರ ಮೋದಿ ಹಾಗೂ ಸೈಯ್ಯದ್ ಅವರ ಮುಖಲಕ್ಷಣದಲ್ಲಿ ಹಲವಾರು ಸಾಮ್ಯತೆಗಳಿವೆ. ಇಬ್ಬರ ಕೂದಲೂಗಳೂ ಒಂದೇ ಬಣ್ಣ. ಇಬ್ಬರೂ ಧರ್ಮದ ತಳಹದಿಯಿಂದಲೇ ಮೇಲೆ ಬಂದವರು. ವಿಶ್ವಶಾಂತಿಗಾಗಿ ಇಬ್ಬರ ಧ್ಯೇಯವೂ ಒಂದೇ ಅಂತೆ..
ಒಟ್ಟಿನಲ್ಲಿ ವಿರೋಧಾಭಾಸದಿಂದ ಕೂಡಿದ ಸಂಶೋಧನೆಯನ್ನು ಕಂಡು ಎಲ್ಲರೂ ಅಚ್ಚರಿಯಲ್ಲಿ ತೇಲಿದರೆ ಕೆಲವರ ಮುಖದಂಚಿನಲ್ಲಿ ಕಿಸಕ್ಕನೆ ನಗು ಮೂಡಿದೆಯಂತೆ…


