ಹೈದರಾಬಾದ್: ಚಿತ್ರರಂಗದಲ್ಲಿ ಅವಕಾಶಗಳ ಕೊರತೆಯಿಂದಾಗಿ ವೇಶ್ಯಾವಾಟಿಕೆಗೆ ಇಳಿದು ಇತ್ತೀಚೆಗಷ್ಟೇ ಸಿಕ್ಕಿಹಾಕಿಕೊಂಡಿದ್ದ ಬಹುಭಾಷಾ ನಟಿ ಶ್ವೇತಾ ಬಸು ನಂತರ ಇದೀಗ ಮತ್ತೊಬ್ಬ ತೆಲುಗು ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೈಟೆಕ್ ವೇಶ್ಯವಾಟಿಕೆಯಲ್ಲಿ ತೊಡಗಿದ್ದ ತೆಲುಗಿನ ಬಿಟೆಕ್ ಬಾಬು ಎಂಬ ಚಿತ್ರದಲ್ಲಿ ನಟಿಸಿದ್ದ ದಿವ್ಯಾ ಶ್ರೀ ಬಂಧಿತ ನಟಿ.
ಆಂಧ್ರದ ಗುಂಟೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಗುಂಟೂರಿನ ಮನೆಯೊಂದರ ಮೇಲೆ ದಾಳಿ ನಡೆಸಿದರು. ಈ ವೇಳೆ ಪೊಲೀಸರಿಗೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ದಿವ್ಯಾಶ್ರೀ ಸಿಕ್ಕಿಬಿದ್ದಿದ್ದಾರೆ. ಜತೆಗೆ ನಟ ಪವನ್ ಕುಮಾರ್, ಚಂದು ಅಲ್ಲದೆ ಇನ್ನೂ ಕೆಲವು ರೂಪದರ್ಶಿ ಕಮ್ ನಟಿಯರು ಪತ್ತೆಯಾಗಿದ್ದಾರೆ. ಈ ಪ್ರಕರಣಕ್ಕೂ ಶ್ವೇತಾ ಬಸು ಸೆರೆ ಸಿಕ್ಕ ಹೈದರಾಬಾದಿನ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣಕ್ಕೂ ಸಂಬಂಧ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೆಲವೊಂದು ಚಿತ್ರಗಳಲ್ಲಿ ನಟಿಸಿ ಐಶಾರಾಮಿ ಜೀವನಕ್ಕೆ ಒಗ್ಗಿಕೊಂಡಿರುವ ಕೆಲ ನಟಿಯರು ತಮ್ಮ ಐಶಾರಾಮಿ ಜೀನವ ನಡೆಸುವುದಕ್ಕಾಗಿ ವೇಶ್ಯಾವಾಟಿಕೆಯಲ್ಲಿ ತೊಡಕಿಕೊಂಡಿರುವುದು ಸರ್ವೇ ಸಾಮಾನ್ಯವಾಗಿದೆ. ಇಂತಹ ಪ್ರಕರಣಗಳು ಹೊರ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡಾ ವೇಶ್ಯಾವಾಟಿಕೆ ಜಾಲದಲ್ಲಿ ಹಲವಾರು ನಟಿಯರು ಸಿಕ್ಕಿಬಿದ್ದಿದ್ದಾರೆ. ದಕ್ಷಿಣದ ನಟಿಯರಾದ ಕಿನ್ನೆಲಾ, ಯಮುನಾ ಸೇರಿದಂತೆ ಭುವನೇಶ್ವರಿ, ಸಯೀರಾ ಭಾನು, ಜ್ಯೋತಿ, ತೆಲುಗು ಕಿರತೆರೆ ನಟಿ ಶ್ರಾವಣಿ ಸೇರಿದಂತೆ ಹಲವು ಹತ್ತು ಮಂದಿ ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದಿದ್ದರು.