ಬಂಟ್ವಾಳ : ಹಿಂದಿ ದೇಶದ ಆತ್ಮ ಭಾಷೆ. ಸರಳ ಮತ್ತು ಸುಗಮವಾದ ಭಾಷೆ ಕಲಿಯುವುದು ನಮ್ಮ ಕರ್ತವ್ಯ ಎಂದು ಮೊಡಂಕಾಪು ಕಾರ್ಮೆಲ್ ಕಾಲೇಜು ಹಿಂದಿ ಉಪನ್ಯಾಸಕಿ ಚಂದ್ರಿಕಾ ಆರ್ ರಾವ್ ಹೇಳಿದರು.ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ಹಿಂದಿ ಸಂಘದ ಅಶ್ರಯದಲ್ಲಿ ನಡೆದ ‘ಹಿಂದಿ ಭಾಷಾ ಕಲಿಕೆ ಮತ್ತು ಮಹತ್ವ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.3M4A0101

ಹಿಂದಿ ಭಾಷೆ ದೇಶಾದ್ಯಾಂತ ಪ್ರಚಲಿತದಲ್ಲಿರುವ ಜತೆ ನಮ್ಮ ಪಾರಂಪರಿಕ ಜ್ಞಾನ, ಪ್ರಾಚೀನ ಸಭ್ಯತೆ ಮತ್ತು ಆಧುನಿಕ ಪ್ರಗತಿಗೆ ನಡುವೆ ಇರುವ ಕೊಂಡಿ.ಯಾವುದೇ ಕೀಳಾರಿಮೆ, ತಾರತಮ್ಯವಿಲ್ಲದೇ ಪ್ರಸಾರ ಮತ್ತು ಪ್ರಚಾರಕ್ಕೆ ಮಹತ್ವ ನೀಡಬೇಕು ಎಂದರು.
ಎಸ್ ವಿ ಎಸ್ ಪ. ಪೂ ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ ಅಧ್ಯಕ್ಷತೆ ವಹಿಸಿ, ಮಾತೃಭಾಷೆಗೆ ಮಹತ್ವ ನೀಡುವಷ್ಟೇ ಪ್ರಾಮುಖ್ಯತೆಯನ್ನು ಪ್ರತಿಯೊಂದು ಭಾಷೆಗೂ ನೀಡಬೇಕು. ರಾಷ್ಟ್ರ ಭಾಷೆಯನ್ನು ಉಳಿಸಿ ಬೆಳೆಸಿ, ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಎಸ್ ವಿ ಎಸ್ ಕಾಲೇಜು ಹಿಂದಿ ಉಪನ್ಯಾಸಕಿ ಮತ್ತು ಹಿಂದಿ ಸಂಘದ ಅಧ್ಯಕ್ಷೆ ಬಬಿತ ಸವಿತ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿಂದಿ ಉಪನ್ಯಾಸಕಿ ಮತ್ತು ಹಿಂದಿ ಸಂಘದ ಸಲಹೆಗಾರೆ ಲಿಯೊನಾ ಪಿಂಟೊ ಸಹಕರಿಸಿದರು.
ವಿದ್ಯಾರ್ಥಿನಿ ಶ್ರದ್ದಾ ಸ್ವಾಗತಿಸಿ, ಪ್ರಿಮಲ್ ರೊಜಾರಿಯೊ ವಂದಿಸಿದರು. ವಿದ್ಯಾರ್ಥಿನಿ ವಿಜೇತ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *