ವಾಮಂಜೂರು: ವಿದ್ಯಾರ್ಥಿಗಳ ಸಾಧನೆಯ ಹಿಂದೆ ಹೆತ್ತವರು, ಗುರುಗಳು, ಶಾಲಾ ಸಿಬ್ಬಂದಿ ವರ್ಗ ಹೀಗೆ ಎಲ್ಲರ ಸಹಕಾರವಿದೆ. ತಮಗೆ ನೆರವಾದವರನ್ನು ನೆನಪಲ್ಲಿಟ್ಟುಕೊಳ್ಳಿರಿ. ಪ್ರಾಮಾಣಿಕತೆ, ಸಮರ್ಪಣಾ ಭಾವ ಹಾಗೂ ಕಠಿಣ ಪರಿಶ್ರಮದಿಂದ ಕೆಲಸ ಮಾಡಿ. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಮಂಗಳೂರಿನ ಬಿಷಪ್ ಮೋಸ್ಟ್ ರೆವೆರಂಡ್, ಡಾ. ಪೀಟರ್ ಪೌಲ್ ಸಲ್ಡಾನಾ ಹೇಳಿದರು.

0911malaliM2
ಅವರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್ ವಾಮಂಜೂರು, ಮಂಗಳೂರು ಇಲ್ಲಿ ನಡೆದ 13ನೇ ಪದವಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗ್ಲೆನ್ ಎ.ಎಲ್. ಡಿಸೋಜಾ ಮಾತನಾಡಿ, ಪದವಿ ಪಡೆಯುವುದಷ್ಟೆ ಸಾಧನೆಯಲ್ಲ. ಸಾಧಕರಾಗುವ ಮೂಲಕ ನಾಯಕರಾಗಲು ಸಾಧ್ಯವಿದೆ. ಪರಿಶ್ರಮದಿಂದ ಕಷ್ಠಪಟು ಮುಂದುವರಿಯಿರಿ ಎಂದು ಬೋಧಿಸಿದರು. ಮತ್ತೊಬ್ಬ ಅತಿಥಿ ಕ್ರಿಸ್ಟೋಫರ್ ಮಾತಾಡಿ, ಪದವಿ ಪಡೆದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ ರಿಯೋ ಡಿಸೋಜಾ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.

0911malaliM1
ಚಿನ್ನದ ಪದಕ:
ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ 7 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಎಂಬಿಎ: ಶರೋನ್ ಅನ್ಸಿತಾ ಲೋಬೋ, ಎಂಸಿಎ: ಪ್ರಾರ್ಥನಾ ಕೆ., ಮೆಕ್ಯಾನಿಕಲ್: ನವೀನ್ ಫೆರ್ನಾಂಡೀಸ್, ಸಿವಿಲ್: ಚೈತ್ರಾ ಎಸ್. ಶೆಟ್ಟಿ, ಕಂಪ್ಯೂಟರ್ ಸೈನ್ಸ್: ಆಶ್ಮಿನ್ ಡಿಸೋಜಾ, ಇಸಿಇ: ಚೇತನ್ ಪಿಂಟೋ, ಇಇಇ: ಪ್ರತೀಕ್ಷಾ ಇವರನ್ನು ಈ ಸಂದರ್ಭದಲ್ಲಿ ಬಿಶಪ್ ಅವರು ಅಭಿನಂದಿಸಿದರು.

0911malaliM3
ಈ ಬಾರಿ 554 ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ, ಕಾರ್ಯಕ್ರಮದಲ್ಲಿ ಹಲವರನ್ನು ಸಮ್ಮಾನಿಸಲಾಯಿತು. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು,
ಕಾಲೇಜಿನ ಸಹಾಯಕ ನಿರ್ದೇಶಕ ರೆ. ಫಾ. ರೋಹಿತ್ ಡಿಕೋಸ್ತಾ, ಡಾ. ಜೋಸೆಫ್ ಗೊನ್ಸಲ್ವಿಸ್, ಕಾಲೇಜಿನ ಡಾ. ವಿನ್ಸೆಂಟ್ ಕ್ರಾಸ್ತಾ, ಇವಿಟಾ ಕೊಯೊಲ್ಲೋ ಮತ್ತಿತರರು ಉಪಸ್ಥಿತರಿದ್ದರು. ರ,ಫಾ. ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ಸ್ವಾಗತಿಸಿದರು, ವಿದ್ಯಾರ್ಥಿಗಳಾದ ರಿಯಾನ್ ಜೋಸೆಫ್ ಲೋಬೋ ಹಾಗೂ ಪೃಥ್ವಿ ವಿ. ಶೆಟ್ಟಿ ಕಾಲೇಜಿನಲ್ಲಾದ ಅನುಭವಗಳನ್ನು ಹಂಚಿಕೊಂಡರು, ಪದವಿ ಸ್ವೀಕಾರ ಕಾರ್ಯಕ್ರಮ ನಡೆಯಿತು. ಫ್ಲೋನಾ ಶಾನ್ ಸೋನ್ಸ್ ಹಾಗೂ ಜೀವನ್ ಲಾರೆನ್ಸ್ ನಿರೂಪಿಸಿದರು. ಸ್ಮಿತಾ ವಿ. ಜಾರ್ಜ್ ಧನ್ಯವಾದ ಸಮರ್ಪಿಸಿದರು.

By suddi9

Leave a Reply

Your email address will not be published. Required fields are marked *