ಕೈಕಂಬ : ಮಂಗಳೂರು ಕಾರ್ಸ್ಟ್ರೀಟಿನ ಡಾ. ಪಿ ದಯಾನಂದ ಪೈ ಮತ್ತು ಪಿ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗ ಹಾಗೂ ಗುರುಪುರ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಶನಿವಾರ ಗುರುಪುರ ಬಂಗ್ಲೆಗುಡ್ಡೆ ಸೈಟಿನ ಅಂಗನವಾಡಿ ಕೇಂದ್ರದಲ್ಲಿ `ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ’ ವಿಷಯದಲ್ಲಿ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿ, ಕಾಲೇಜಿನ ಕನ್ನಡ ಸಹ ಪ್ರಾದ್ಯಾಪಕಿ ಡಾ. ನಾಗವೇಣಿ ಮಂಚಿ ಮಾತನಾಡುತ್ತ, ಮಕ್ಕಳ ಬೆಳವಣಿಗೆಯಲ್ಲಿ ತಾಯಿಯಷ್ಟೇ ತಂದೆಯ ಪಾತ್ರವೂ ಇದೆ. ಈ ಕರ್ತವ್ಯದಿಂದ ಪಾಲಕರು ನುಣುಚಿಕೊಳ್ಳುವಂತಿಲ್ಲ. ತಪ್ಪು ಮಾಡಿದಾಗ ಶಿಕ್ಷಕರು ಬುದ್ಧಿ ಹೇಳಬೇಕೇ ಹೊರತು ಮಕ್ಕಳಿಗೆ ಶಿಕ್ಷೆ ನೀಡುವುದಲ್ಲ. ಮಕ್ಕಳ ಮನಸ್ಸಿಗೆ ಶಿಕ್ಷೆಯ ಪಾಠ ಮಾಡುತ್ತ ಹೋದರೆ, ಮುಂದೆ ಆ ಮಗು ಬೆಳೆದು ಅಪರಾಧಿಯಾಗುವ ಅಪಾಯವಿದೆ. ಪಾಲಕರು ಮತ್ತು ಶಿಕ್ಷಕರಿಂದ ಮಕ್ಕಳ ಮನಸ್ಸು ಅರಳಿಸುವ ಕೆಲಸವಾಗಬೇಕೇ ಹೊರತು ನರಳಿಸುವುದಲ್ಲ ಎಂದರು.
ಮಕ್ಕಳಿಗೆ ತಂದೆ-ತಾಯಿ ಪ್ರೀತಿ ನೀಡಬೇಕು. ಪ್ರೀತಿಯಿಂದ ಈ ಜಗತ್ತನ್ನು ಜಯಸಿಬಹುದು, ಶಿಕ್ಷೆಯಿಂದಲ್ಲ. ಮಕ್ಕಳೆದುರು ಪೋಷಕರು ಸುಳ್ಳುಮ ದ್ವೇಷದ ಮಾತುಗಳನ್ನಾಡಬಾರದು. ಯಾಕೆಂದರೆ, ಮಕ್ಕಳು ಪೋಷಕರ ಭಾವನೆಗಳಿಗೆ ಹೆಚ್ಚು ಸ್ಪಂದಿಸುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಮೊಬೈಲ್, ಮೆಚ್ಚುಗೆ ಬೇಡ. ನಿಮ್ಮ ಮಕ್ಕಳಲ್ಲಿರುವ ಒಂದು ವಿಶಿಷ್ಟ ಗುಣ ಗುರುತಿಸಿ, ಬೆಳೆಸುವ ಜಾಣ್ಮೆ ನಿಮ್ಮದಾಗಲಿ ಎಂದವರು ಮಕ್ಕಳ ಪೋಷಕರಿಗೆ ಕಿವಿಮಾತನ್ನಾಡಿದರು.
ಸ್ಥಳೀಯ ವಾರ್ಡ್ ಸದಸ್ಯ ರಾಜೇಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಗುರುಪುರ ಗ್ರಾಪಂ ಉಪಾಧ್ಯಕ್ಷ ಉದಯ ಭಟ್, ಮಕ್ಕಳಿಗೆ ಮನೆಯೇ ದೇವಾಲಯ. ತಾಯಿಯೇ ಮೊದಲ ಗುರು. ಮಕ್ಕಳು ಮಾದಕ ವಸ್ತುವಿನ ವ್ಯವಸನಿಗಳಾಗದಂತೆ ನೋಡಿಕೊಳ್ಳಿ. ಮಕ್ಕಳಲ್ಲಿ ಪರಿಸರ ಸ್ವಚ್ಚದ ಬಗ್ಗೆ ತಿಳಿ ಹೇಳಿ, ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಪಾಲಕರು ಕಠಿಬದ್ಧರಾಗಬೇಕು ಎಂದರು.
ಕಾರ್ಸ್ಟ್ರೀಟ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಶುಭಾ ಪ್ರಾಸ್ತಾವಿಕ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಭಾರತಿ ಸಂದರ್ಭೋಚಿತ ಮಾತನಾಡಿದರು. ವಿದ್ಯಾರ್ಥಿನಿ ಎಲಿಜಬೆತ್ ಸ್ವಾಗತಿಸಿದರೆ, ವಿದ್ಯಾರ್ಥಿನಿ ರಂಜನಿ ವಂದಿಸಿದರು. ವೇದಿಕೆಯಲ್ಲಿ ಗ್ರಾಪಂ ಸದಸ್ಯೆ ಸೇಸಮ್ಮ, ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಹಾಗೂ
