ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಮಿನಿ ವಿಧಾನಸೌಧ ಬಳಿ ಇಂದಿರಾ ಕ್ಯಾಂಟೀನ್ ಎದುರು ರಸ್ತೆ ಆವರಣಗೋಡೆ ಮಿರ್ನಿಸಲು ಮುಂದಾದ ವೇಳೆ ಪುರಸಭಾ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ನೇತೃತ್ವದಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿಗೆ ತಡೆ ಒಡ್ಡಿದ ಘಟನೆ ಶನಿವಾರ ನಡೆದಿದೆ.

ಇಂದಿರಾ ಕ್ಯಾಂಟೀನ್ ಹಿಂಬದಿ ಆವರಣಗೋಡೆ ನಿರ್ಮಿಸಲಾಗಿದ್ದು, ಶನಿವಾರ ಕ್ಯಾಂಟೀನ್ ಎದುರಿನ ಮುಖ್ಯ ರಸ್ತೆಗೆ ಏಕಾಯೇಕಿ ಆವರಣಗೋಡೆ ನಿರ್ಮಿಸಲು ಕಾರ್ಮಿಕರು ಮುಂದಾಗಿದ್ದಾರೆ. ಮೊದಲೇ ಕಿರಿದಾಗಿರುವ ಈ ರಸ್ತೆಗೆ ಮತ್ತೆ ಆವರಣಗೋಡೆ ನಿರ್ಮಿಸುವುದರ ಜೊತೆಗೆ ಮಿನಿ ವಿಧಾನಸೌಧ ಆವರಣ ಗೋಡೆಗೂ ಹಾನಿ ಉಂಟು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.
ಯೋಜನಾ ನಿರ್ದೇಶಕ ಪ್ರಸನ್ನ, ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ಎಂಜಿನಿಯರ್ ಡಿಮೆಲ್ಲೊ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆಯೇ ಅವರು ನಿರ್ಗಮಿಸಿದ್ದಾರೆ ಎಂದು ಮೆಲ್ಕಾರಿನಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಗೋವಿಂದ ಪ್ರಭು ದೂರಿ ನೀಡಿದರು.
