ಎಸ್ಕೆಎಸ್ಸೆಸೆಫ್ ಅಡ್ಡೂರು ಕ್ಲಷ್ಟರ್ ವತಿಯಿಂದ ‘ಲಹರಿ ವಿರುದ್ಧ ಜನಜಾಗೃತಿ ಕಾರ್ಯಕ್ರಮ’
ಅಡ್ಡೂರು: ಆರೋಗ್ಯ ಕರ್ನಾಟಕಕ್ಕೆ ಯುವಜನ ಜಾಗೃತಿ ಅಭಿಯಾನದಡಿ ಎಸ್ಕೆಎಸ್ಸೆಸೆಫ್ ಅಡ್ಡೂರು ಕ್ಲಷ್ಟರ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಲಹರಿ ವಿರುದ್ಧ ಜನಜಾಗೃತಿ’ ಕಾರ್ಯಕ್ರಮ ಗುರುವಾರ ನಡೆಯಿತು.
ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಶರೀಫ್ ದಾರಿಮಿ ದುವಾಶೀರ್ವಚನ ನೆರವೇರಿಸಿದರು.
ಬಳಿಕ ಕಾರ್ಯಕ್ರಮ ಉದ್ಘಾಟಿಸಿ ದ.ಕ.ಜಿಲ್ಲಾ ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ.ಇಬ್ರಾಹೀಂ ಮಾತನಾಡಿ, ಯುವಜನಾಂಗ ನಿತ್ಯ ಮದ್ಯ-ಮಾದಕ ಸೇವನೆಗಳಿಗೆ ಬಲಿಯಾಗುತ್ತಿದೆ. ಇದರಿಂದ ದೂರವಿದ್ದು, ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮಾದಕ ವಸ್ತುಗಳ ಸೇವೆನೆಯಿಂದಾಗುವ ನಕಾರಾತ್ಮಕ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಎಚ್ಚರಿಕೆ ಮಾಹಿತಿ ನೀಡಿದರು.
ಎಸ್ಕೆಸ್ಸೆಸೆಫ್ ಕೈಕಂಬ ವಲಯ ಅಧ್ಯಕ್ಷ ಟಿ.ಪಿ.ಜಮಾಲುದ್ದೀನ್ ದಾರಿಮಿ ಮಾತನಾಡಿ, ಮಾದಕ ದ್ರವ್ಯ ಓರ್ವ ವ್ಯಕ್ತಿಯ ಒಳ ಪ್ರವೇಶಿಸಿ ಅದು ಆತನ ಮೆದುಳಿನಲ್ಲಿ ಶಕ್ತಿ ತಾಳಿ ಬಳಿಕ ಇನ್ನು ಯಾವುದೇ ಕಾರಣಕ್ಕೂ ಇದನ್ನು ನಾನು ಬಿಡುವುದಿಲ್ಲ ಎನ್ನುವ ಚಟವೇ ಲಹರಿ ಎಂದು ಪ್ರತಿಪಾದಿಸಿದವರು.
ಮಾದಕ ವಸ್ತುಗಳ ಸೇವೆನೆಯಿಂದ ದೈಹಿಕ ಹಾಗೂ ಮಾನಸಿಕವಾಘಿ ಕುಗ್ಗುತ್ತಾರೆ. ವಿಶ್ವದ ಮನುಕುಲಕ್ಕೆ ಮಾರಕವಾಗಿ ಕಾಡುತ್ತಿರುವ ಮದ್ಯ ಮತ್ತು ಮಾದಕ ಸೇವನೆ ಯುವ ಸಮುದಾಯವನ್ನು ದಿಕ್ಕು ತಪ್ಪಿಸುತ್ತಿದೆ ಎಂದರು.
ಈ ವೇಳೆ ಯು.ಪಿ.ಇಬ್ರಾಹೀಂ ಅವರು ಹಾಫಿಲ್ ಮುನಾವರ್ ಅವರಿಗೆ ಕರಪತ್ರ ನೀಡುವ ಮೂಲಕ ಕರಪತ್ರ ವಿತರಣಾ ಜಾಗೃತಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಕೆಸ್ಸೆಸೆಫ್ ಅಡ್ಡೂರು ಕ್ಲಷ್ಟರ್ ಅಧ್ಯಕ್ಷ ಬಶೀರ್ ಸಾಗರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್ಕೆಸ್ಸೆಸೆಫ್ ಅಡ್ಡೂರು ಕ್ಲಷ್ಟರ್ ಕಾರ್ಯದರ್ಶಿ ಅಕ್ಬರ್ ಆಲಿ, ಸಾಹುಲ್ ಹಮೀದ್ ಮೆಟ್ರೊ, ಡಾ.ಇ.ಕೆ.ಸಿದ್ದೀಕ್, ಅಡ್ಡೂರು ಸಹರಾ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯ ಕೇಶವ.ಎಚ್, ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ, ಎಂ.ಎಚ್. ಹಾಜಿ ಮೊಹಿಯುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕ್ಲಷ್ಟರ್ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಸಲಾಂ ಸ್ವಾಗತಿಸಿದರು. ಕೋಶಾದಿಕಾರಿ ಅಬ್ದುಲ್ ಜಬ್ಬಾರ್ ನಿರೂಪಿಸಿ, ವಂದಿಸಿದರು.