ಕಡಬ: ಫ್ರೆಂಡ್ಸ್ ಕುಂಡಡ್ಕ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ಪ್ರೋ ಕಬಡ್ಡಿ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟವು ಕುಂಡಡ್ಕ ಗುಣಶ್ರೀ ವಿದ್ಯಾಲಯದ ಮೈದಾನದಲ್ಲಿ ಅ.27ರಂದು ಸಂಜೆ 3 ಗಂಟೆಯಿಂದ ನಡೆಯಲಿದೆ.
ಈ ಪಂದ್ಯಾಟದ ಉದ್ಘಾಟನೆಯನ್ನು ಬಂಟ್ವಾಳ ತಾಲೂಕು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೊಪ್ಪಳ ಇವರು ವಹಿಸಳಿದ್ದಾರೆ. ಮುಖ್ಯ ಅತಿಥಗಳಾಗಿ ಅಶೋಕ್ ರೈ ಕೊಡಿಂಬಾಡಿ, ಭಾರತ್ ಶಾಮಿಯಾನಾದ ಸಂಜೀವ ಪೂಜಾರಿ, ಅಬೂಬಕ್ಕರ್ ಶಾಂತಿಮಾರು, ಪ್ರಶಾಂತ್ ಶೆಟ್ಟಿ ಬರೆ, ಹರೀಶ್ ಮರುವಾಳ, ನಾಸಿರ್ ಪಾದೆ, ಚರಣ್ ಮರುವಾಳ, ಉಮೇಶ್ ನಾಯ್ಕ ಪಿಲಿಂಜ ಮತ್ತು ಮಹೇಶ್ ಓಟೆ ಮಂಗಳೂರು ಇವರು ಭಾಗವಹಿಸಲಿದ್ದಾರೆ.
