Published On: Mon, Dec 17th, 2018

ಜೇಸಿಐ ಭಾರತ ವಲಯ 15 ರ ನೂತನ ವಲಯಾದ್ಯಕ್ಷಅಶೋಕ್‍ಚುಂತಾರ್ ನೇತೃತ್ವದ ವಲಯ ಪದಪ್ರಧಾನ ಸಮಾರಂಭ

ಸುಳ್ಯ:  ಜೇಸಿಐ ಭಾರತ ವಲಯ 15(ಉಡುಪಿ,ದ.ಕ ಮತ್ತುಉತ್ತರಕನ್ನಡಜಿಲ್ಲಾ ವ್ಯಾಪ್ತಿ)ರ ನೂತನ ವಲಯಾದ್ಯಕ್ಷಅಶೋಕ್‍ಚುಂತಾರ್ ನೇತೃತ್ವದ ವಲಯ ಪದಪ್ರಧಾನ ಸಮಾರಂಭ ಡಿ.15 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಜೆಒಸಿ ಮೈದಾನದಲ್ಲಿ ನಡೆಯಿತು.f88a06a8-4784-4991-b8c4-b30267e875ab

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದೇವಾಲಯದ ವ್ಯವಸ್ಥಾಪನಾ ಮಂಡಳಿಯ ಅದ್ಯಕ್ಷ ನಿತ್ಯಾನಂದ ಮುಂಡೋಡಿ,ಜೇಸಿ ಸಂಸ್ಥೆಯುಯುವಜನಾಂಗದಲ್ಲಿ ನಾಯಕತ್ಯವನ್ನು ಬೆಳಿಸಿ ಅವರನ್ನುದೇಶದಉತ್ತಮ ನಾಗರೀಕರನ್ನಾಗಿ ಮಾಡುವ ಪ್ರಮುಖಕಾರ್ಯ ಮಾಡುತ್ತಿದೆ.ವ್ಯಕ್ತಿತ್ವ ವಿಕಸನದ ಮೂಲಕ ಸಮಾಜದಲ್ಲಿ ಮೌನಕ್ರಾಂತಿಯನ್ನು ಈ ಸಂಸ್ಥೆಯು ಮಾಡುತ್ತಿರುವುದು ಅಭಿನಂದನೀಯ,ಜೇಸಿಐ ಭಾರತದ ವಲಯ 15ರ ನಿಯೋಜಿತ ವಲಯಾದ್ಯಕ್ಷಅಶೋಕ್‍ಚುಂತಾರ್‍ರವರು ಯುವಜೇಸಿಯಾಗಿ ತನ್ನ ಜೇಸಿ ಜೀವನವನ್ನು ಪ್ರಾರಂಭಿಸಿ ಇಂದು ವಲಯಾದ್ಯಕ್ಷರಾಗಿರುವುದು ನಮ್ಮ ಹೆಮ್ಮೆಯ ವಿಷಯಎಂದರು.3979f7e1-073b-471b-a4d8-b5e916dbf56b

 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜೇಸಿಐ ಭಾರತದ ಫೌಂಡೇಶನ್ ನಿರ್ದೇಶಕ ವೈ ಸುಕುಮಾರ್ ಜೇಸಿ ಸಂಸ್ಥೆಯಲ್ಲಿ ಸುಗುವ ಅವಕಾಶವನ್ನು ಬಳಸಿ ಸಮಾಜದಲ್ಲಿಉತ್ತಮ ನಾಗರೀಕರಾಗಿ ಬದುಕಬಹುದುಯುವಜನರು ಈ ಬಗ್ಗೆ ಜೇಸಿ ಸಂಸ್ಥೆಯನ್ನು ಸೇರುವಂತೆಅವರು ಪ್ರೇರೆಪಣೆ ನೀಡಿದರು.

 

ಪೂರ್ವರಾಷ್ಟೀಯಉಪಾದ್ಯಕ್ಷರಾದ ಮುರಳಿಶ್ಯಾಂ,ಸದಾನಂದ ನಾವಡ ಶುಭ ಹಾರೈಸಿದರು.ವೇದಿಕೆಯಲ್ಲಿರಾಷ್ಟೀಯ ಬೆಳವಣಿಗೆ ಮತ್ತುಅಭಿವೃದ್ದಿ ವಿಭಾಗದ ನಿರ್ದೇಶಕಚಂದ್ರಶೇಖರ್ ನಾಯರ್,ಲಯನ್ಸ್ ಸಂಸ್ಥೆಯ ಪೂರ್ವಗವರ್ನರ್ ಎಂ.ಬಿ ಸದಾಶಿವ,ಸುಳ್ಯ ಪಯಸ್ವಿನಿ ಜೇಸಿಯ ಸ್ಥಾಪಕ ಅದ್ಯಕ್ಷಧನಂಜಯ ಮದುವೆಗದ್ದೆ,ಪೂರ್ವಅದ್ಯಕ್ಷರಾದಕೆ.ಅರ್‍ಗಂಗಾಧರ್,ಅಬ್ದುಲಾಅರಂತೋಡು,ದಿನೇಶ್ ಮದಪಾಡಿ ,ವಲಯಾದ್ಯಕ್ಷರಾಕೇಶ್‍ಕುಂಜೂರು ಮುಂತಾದವರಿದ್ದರು.ನಿಯೋಜಿತ ವಲಯಾದ್ಯಕ್ಷಅಶೋಕ್‍ಚುಂತಾರ್‍ಅದ್ಯಕ್ಷತೆ ವಹಿಸಿ ಮಾತನಾಡಿದರು.

 

ದಿನೇಶ್ ಅಂಬೆಕಲ್ಲು,ಸುಳ್ಯ ಪಯಸ್ವಿನಿ ಅದ್ಯಕ್ಷತೀರ್ಥವರ್ಣ ಬಳಡ್ಕ ಚಂದ್ರಶೇಖರ್‍ಕನಕಮಜಲು,ವಲಯಉಪಾದ್ಯಕ್ಷರಾಯನ್‍ಉದಯ್,ಗುರುರಾಜ್‍ಅಜ್ಜಾವರ ಮುಂತಾದವರಿದ್ದರು.ತಾಂತ್ರಿಕವಾಗಿ ವಲಯಾಧಿಕಾರಿಗಳಾದ ಪ್ರಶಾಂತ್‍ಕುಮಾರ್‍ರೈ,ರಾಘವೇಂದ್ರ ಪ್ರಭುಕರ್ವಾಲು,ರಕ್ಷಿತ್‍ಕುಡುಪು,ಶೃತಿ ಬಳಡ್ಕ ,ಮನಮೋಹನ್ ಬಳಡ್ಕ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಪೂರ್ವ ವಲಯಾದ್ಯಕ್ಷರು,ವಿವಿಧ ಘಟಕಗಳ ಅದ್ಯಕ್ಷರು ಮತ್ತು ಸಮಸ್ತ ಜೇಸಿ ಬಂದುಗಳು ಭಾಗವಹಿಸಿದ್ದರು.ಸಭಾ ಕಾರ್ಯಕ್ರಮದ ಮೊದಲುಸುಳ್ಯ ನಗರದಲ್ಲಿವಿಶೇಷ ಮೆರವಣಿಗೆ ನಡೆಯಿತು.ಅಲ್ಲದೆ ಸುಳ್ಯ ಜೇಸಿಯ ಪದಪ್ರಧಾನ ಸಮಾರಂಭ ನಡೆಯಿತು.ವಲಯಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter