ಸುದ್ದಿ9ಪೆರಾರ:ದೇವ ಮಾತೆಯ ಜನನವನ್ನು ಸಾರುವ ಮೊಂತಿ ಫೆಸ್ತ್ ಅಥವಾ ತೆನೆಹಬ್ಬವನ್ನು ಫೆರಾರ್ ಸಂತ ಫ್ರಾನ್ಸಿಸರ ದೇವಾಲಯದಲ್ಲಿ ಬಹು ಅದ್ದೂರಿಯಾಗಿ ಆಚರಿಸಲಾಯಿತು.ಪ್ರಧಾನ ಪ್ಯೂಸ್ ಪಿಡೆಲಿಸ್ ಪಿಂಟೊ ಗುರುಗಳಾಗಿ ಉಪಸ್ಥಿತರಿದ್ದರು. ಪವಿತ್ರ ಬುಪೂಜೆಯ ಮೊದಲು ಪುಟ್ಟ ಮಕ್ಕಳು ತಂದಿದ್ದ ಹೂಗಳನ್ನು ಬಾಲೆ ಮಾತೆಗೆ ಸಮರ್ಪಿಸಲಾಯಿತು.ನಂತರ ಪವಿತ್ರ ಬಲಿಪೂಜೆಯಲ್ಲಿ ಭಾಗಿಯಾದ ಸರ್ವರಿಗೂ ಸಿಹಿತಿಂಡಿ ಹಾಗೂ ಕಬ್ಬನ್ನು ವಿತರಿಸಲಾಯಿತು. ಪವಿತ್ರಗೊಳಿಸಿದ ತೆನೆಯನ್ನು ಮಧ್ಯಾಹ್ನದ ಕುಟುಂಬ ಭೋಜನದೊಂದಿಗೆ ಸವಿಯಲು ಸರ್ವರಿಗೂ ವಿತರಿಸಲಾಯಿತು.






