ಸುದ್ದಿ9ವಾಮಂಜೂರು ಶ್ರಮಿಕ ಸಂತ ಜೋಸೆಫರ ದೇವಾಲಯದಲ್ಲಿ ಮೊಂತಿ ಫೆಸ್ತ್ ನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ವಾಮಂಜೂರಿನಿಂದ ದೇವಾಲಯದ ಮಾರ್ಗದುದ್ದಕ್ಕೂ ಮಕ್ಕಳು ಪುಷ್ಪಾರ್ಚನೆಗೈದು ಕನ್ಯಾಮರಿಯಮ್ಮರಿಗೆ ವಂದನೆ ಸಲ್ಲಿಸಿದರು. ಪ್ರಧಾನಗುರು ವಂ.ಸಿಪ್ರಿಯನ್ ಪಿಂಟೊರವರ ಮುಂದಾಳತ್ವದಲ್ಲಿ ನಡೆದ ಬಲಿಪೂಜೆಯಲ್ಲಿ ನೂರಾರು ಭಕ್ತಾಧಿಗಳು ಪಾಲ್ಗೊಂಡರು. ಎಲ್ಲರಿಗೂ ಪವಿತ್ರ ತೆನೆ, ಕಬ್ಬು ಹಂಚಲಾಯಿತು. ಬಡಬಗ್ಗರಿಗೆ ಹಬ್ಬದ ಸಲಿವಾಗಿ ದವಸ ಧಾನ್ಯಗಳನ್ನು ನೀಡಲಾಯಿತು. ಪಾಲನಾ ಸಮಿತಿಯ ರೋಶನ್ ಕಾಮತ್, ಜೋಕಿಂ ಡಿ’ಸೋಜಾ ಹಾಗೂ ಸದಸ್ಯರು ಹಾಗೂ ವಾಮಂಜೂರು ವಾಡರ್ಿನ ಸರ್ವ ಸದಸ್ಯರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು

.













