ಪೊಳಲಿ :ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನೂತನ ಧ್ವಜಸ್ತಂಭದ ನಿರ್ಮಾಣ ಸಮಿತಿ ಬಿಲ್ಲವರ ಸಮಾಜದ ವತಿಯಿಂದ ಸೇವಾರೂಪವಾಗಿ ನೀಡುವ ನೂತನ (ಧ್ವಜಸ್ತಂಭ) ಕೊಡಿಮರದ ವಿಜ್ಞಾಪನಾಪತ್ರವನ್ನು ಪೊಳಲಿ ದೇವಳದಲ್ಲಿ ಪ್ರಾರ್ಥಿಸಿ ಬಿಡುಗಡೆಗೊಳಿಸಿ. ನಂತರ ಸರ್ವಮಂಗಲಾ ಕಲ್ಯಾಣ ಮಂಟಪದಲ್ಲಿ ನಡೆದ ಬಿಲ್ಲವರ ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿಯ ಸಭೆಯಲ್ಲಿ ಪುರುಷ ಎನ್ ಸಾಲಿಯಾನ್ ಧ್ವಜಸ್ತಂಭದ ಬಗ್ಗೆ ಮಾಹಿತಿ ನೀಡಿದರು.
ಕ್ಷೇತ್ರದ ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ ಅವರ ನಿರ್ದೇಶನದಂತೆ ಮರದ ಕೆತ್ತನೆ ಕಾರ್ಯ ಪೂಣ್ಗೊಂಡು ತೈಲಾಧಿವಾಸ ನೆರವೇರಿಸಿದ್ದು ಸುಮಾರು 8000 ಲೀ ಶುದ್ಧ ಎಳ್ಳೆಣ್ಣೆಯಲ್ಲಿ ಧ್ವಜಸ್ತಂಭವನ್ನು ಇಡಲಾಗಿದೆ.
ಕೊಡಿಮರದ ತಾಮ್ರ ಹೊದಿಕೆ:
ಕೊಡಿಮರಕ್ಕೆ ತಾಮ್ರಮುಚ್ಚಲು 2000 ಸಾವಿರ ಕೆ.ಜಿ ತಾಮ್ರ ಹೊದಿಕೆಗೆ ಬೇಕಾಗಿದ್ದು ಇದಕ್ಕೆ 36 ಲಕ್ಷ ರೂಪಾಯಿ ತಗಲಬಹುದೆಂದು ನಿರೀಕ್ಷಿಸಕಲಾಗಿದೆ. ಆಧಾರಶಿಲೆ, ನವರತ್ನ,ದಂಬೆಕಲ್ಲು, ಧ್ವಜಸ್ಥಂಭದ ಪೀಠ ಇದಕ್ಕೆ ಸೂಮಾರು 8 ಲಕ್ಷ ತಗಲಬಹುದುದು. 5 ಪೀಟು ಎತ್ತರ ಹಾಗೂ 3 ಪೀಟು ಅಗಲ ನವಿಲಿನ ಉಬ್ಬು ಚಿತ್ರ ಇರುವ ಬೆಳ್ಳಿಯ ಗರುಡ ಧ್ವಜಕ್ಕೆ 18 ಕೆ.ಜಿ ಯಷ್ಟು ಬೆಳ್ಳಿಗೆ 00 ಲಕ್ಷ ರೂಪಾಯಿ ಅಲ್ಲದೆ ಧ್ವಜಸ್ಥಂಭದ ತುದಿಯಲ್ಲಿ ಬೆಳ್ಳಿಯ ನವಿಲಿಗೆ ಚಿನ್ನದ ಲೇಪ ಕೊಡಲಿದ್ದು ಇದಕ್ಕೆ ಸುಮಾರು 12 ಲಕ್ಷ ರೂಪಾಯಿ ಆಗಲಿದೆ ಒಟ್ಟು ಧ್ವಜಸ್ತಂಭ ನಿರ್ಮಾಣಕ್ಕೆ 1 ಕೋಟಿ ತಗಲಬಹುದು ಎಂದು ಅಂದಾಜಸಲಾಗಿದೆ.

ಸುಮಾರು 66 ಮುಕ್ಕಾಲು ಅಡಿ ಎತ್ತರದ ಕೊಡಿಮರವು ಜಿಲ್ಲೆಯಲ್ಲೆ ಅತೀ ಎತ್ತರದ ಧ್ವಜಸ್ತಂಭವಾಗಿ ನಿಲ್ಲಲಿದೆ.ನುರಿತ ಶಿಲ್ಪಿಗಲಾದ ಕಂಚು ಮತ್ತು ತಾಮ್ರದ ಕೆಲಸಗಳನ್ನು ಕಾಂಞಗಾಡ್ ವಿ.ಪಿ ಪ್ರಕಾಶನ್ ಕಪ್ಪುಕಲ್ಲಿನ ಕೃಷ್ಣ ಶಿಲೆಯ ಪೀಟದ ಕೆಲಸವನ್ನು ಕಾರ್ಕಳ ಕ್ರಷ್ಣಾಚಾರ್,ನವೀಲು ಧ್ವಜದ ಬೆಳ್ಳಿಯಕೆಲಸವನ್ನು ತುಪ್ಪೆಕಲ್ಲು ಧನಂಜಯ ಆಚಾರ್ಯ ಶಿಘ್ರಗತಿಯಲ್ಲಿ ಮಾಡಿಕೊಡಲಿದ್ದಾರೆ ಎಂದು ಚಂದಪ್ಪ ಅಂಚನ್ ತಿಳಿಸಿದರು.
ನೂತನಧ್ವಜಸ್ತಂಭ ನಿರ್ಮಾಣ ಸಮಿತಿಯ ಗೌರವ ಅಧ್ಯಕ್ಷ ರಾಮದಾಸ್ ಕೋಟ್ಯಾನ್ ಮಜಿಲಗುತ್ತು, ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ,ಪ್ರ.ಕಾರ್ಯದರ್ಶಿಪುರುಷ ಎನ್ ಸಾಲಿಯಾನ್, ಚಂದಪ್ಪ ಸಾಲಿಯಾನ್, ಬಳ್ಳಿ ಚಂದ್ರಶೇಖರ , ಗೋಪಲಕೃಷ್ಣ ಕೈಕಂಬ, ಉಮೇಶ್ ಪೂಜಾರಿ ಬಾರಿಂಜ,ಜಯಾನಂದ ಅಂಚನ್, ನಾರಾಯಣ ಎಂ ಅಮ್ಮುಂಜೆ, ರಾಜು ಕೋಟ್ಯಾನ್, ಯಶವಂತ ಕೋಟ್ಯಾನ್, ಭುವನೇಶ್ ಪಚಿನಡ್ಕ, ಚಂದಪ್ಪ ಅಂಚನ್ ಮಜಿಲಗುತ್ತು, ಉಧ್ಯಮಿ ಗಂಗಾಧರ ಪೂಜಾರಿ ಕೊಪ್ಪಲ , ಗಣೇಶ್ ಪೂಜಾರಿ,ಮಾ.ತಾ.ಪಂ ಸದಸ್ಯ ಯಶವಂತ ದೇರಾಜೆ, ಸದಾಶಿವ ಕರ್ಕೇರಾ ಕಾಜಿಲ,ರಾಮಪ್ಪ ಪೂಜಾರಿ,ಪ್ರಶಾಂತ್ವಿಮಲಕೋಡಿ,ದೀಪಾಕ್,ಸತೀಶ್ಚಂದ್ರಇರುವೈಲ್ ಪಾಣಿಲ, ದೇವುದಾಸ್ ಅಂಚನ್ ಗುರುಪುರ,ಚರಣ್ ಬಡಕಬೈಲ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.






