ಮೂಡುಬಿದಿರೆ : ಇಲ್ಲಿನ ಕಡಂದಲೆ ಸ್ಪ್ರಿಂಗ್‍ನ ರೀತಿ ವರ್ತಿಸುತ್ತಿದ್ದ ಭೂಮಿಯ ವಿಚಾರದ ಕುರಿತು ಸ್ಥಳೀಯ ಹೋರಾಟಗಾರರು ಪ್ರಗತಿಪರ ಕೃಷಿಕರು, ಭೂಮಿಯ ಬದಲಾವಣೆಗೆ ಕಾರಣ ಸ್ಥಳೀಯ ಕ್ವಾರಿಯೊಂದರ ಜಲ್ಲಿಹುಡಿ ಪದರ ಹಾಗೂ ಅದರ ಕೆಳಗೆ ಹರಿದಾಡುವ ನೀರಿನ ಒರತೆಯೇ ಹೊರತು ವಿಸ್ಮಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Kadandale Issue (2)
ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆಯಲ್ಲಿ ಸ್ಪ್ರಿಂಗ್ ಮಾದರಿಯಲ್ಲಿ ಭೂಮಿ ಅಲುಗಾಡಿದ್ದು, ಕಳೆದ ಎರಡು ದಿನಗಳಿಂದ ಚರ್ಚೆಗೆ ಗ್ರಾಸವಾದ ವಿಷಯವಾಗಿದೆ. ನೀರಿನ ಮೇಲೆ ತೇಲಿದಂತಿರುವ ಭೂಮಿಯ ಒಳಗೆ ನೀರು, ಅದರ ಮೇಲೆ ಪಕ್ಕದ ಕ್ವಾರಿಯೊಂದರ ಹರಡಿರುವ ಜಲ್ಲಿಹುಡಿಯಿಂದಾಗಿ ಅದು ಸ್ಪ್ರಿಂಗ್‍ನಂತಾಗಿದೆ ಎಂದು ಸ್ಥಳೀಯ ಪ್ರಗತಿಪರ ಕೃಷಿಕರು ಹಾಗೂ ಹೋರಾಟಗಾರರು ತಿಳಿಸಿದ್ದಾರೆ. ಇದು ಯಾವುದೇ ರೀತಿಯ ವಿಸ್ಮಯವಲ್ಲ, ಬದಲಾಗಿ ವೈಜ್ಞಾನಿಕ ಕಾರಣವಿದೆ ಇದೆ ಎಂದು ತಿಳಿಸಿದ್ದಾರೆ.

Kadandale Issue (4)
ಹೋರಾಟಗಾರ, ಕೃಷಿಕ ಸಂತೋಷ್ ಶೆಟ್ಟಿ ಅವರು ಪತ್ರಿಕೆ ಮಾಹಿತಿ ನೀಡಿ, ಕಡಂದಲೆ ಗ್ರಾಮದ ಬೊಮ್ಮಾಲಗುಡ್ಡೆ ಸಮೀಪದ ಗುಡ್ಡದಲ್ಲಿ ಕಳೆದ ಹಲವು ದಶಕಗಳಿಂದ ಈ ಭಾಗದಲ್ಲಿ ಕೇರಳ ಮೂಲದ ಪಾಪ್‍ಸನ್ ಕಂಪೆನಿ ಕ್ವಾರಿ ನಡೆಸಿದ್ದು, ನ್ಯಾಯಾಲಯದ ಆದೇಶದಂತೆ ಇತ್ತೀಚಿನ ವರ್ಷಗಳ ಹಿಂದೆ ಅದನ್ನು ಬಂದ್ ಮಾಡಲಾಗಿದೆ. ಕ್ವಾರಿಯಿಂದಾಗಿ ಈ ಪ್ರದೇಶದಲ್ಲಿ ಬೆಟ್ಟದ ರೀತಿಯಲ್ಲಿ ಜಲ್ಲಿಹುಡಿಗಳು ಶೇಖರಿಸಲಾಗಿದ್ದು, ಕೋರ್ಟ್ ನಿರ್ದೇಶನದಂತೆ ಮೂರು ವರ್ಷಗಳ ಹಿಂದೆ ವಿಲೇವಾರಿ ಮಾಡಲಾಗಿತ್ತು. ಆದರೆ ಹೇರಳ ಪ್ರಮಾಣದಲ್ಲಿ ಶೇಖರಣೆಯಾಗಿದ್ದ ಜಲ್ಲಿಹುಡಿಗಳು ಸ್ಥಳೀಯ ಗುಡ್ಡ ಪ್ರದೇಶಗಳು ಹಾಗೂ ಒರತೆಯಿರುವ ಹಾಗೂ ಹರಿಯುವ ನೀರಿನ ಹಳ್ಳ, ತೋಡುಗಳನ್ನು ಸೇರಿಕೊಂಡಿದೆ.

Kadandale Issue (1)

ಜಲ್ಲಿಹುಡಿಗಳು ಮಣ್ಣಿನೊಂದಿಗೆ ಮಿಶ್ರಣವಾಗಿ ನೀರಿನ ಮೇಲೆ ಪದರುಗಳಾಗಿ ಪರಿವರ್ತನೆಯಾಗಿದೆ. `ರಬ್ಬರ್’ ರೀತಿಯಲ್ಲಿ ನೀರಿನ ಮೇಲೆ ಹರಡಿದ್ದು, ಮೇಲ್ಬಾಗ ಸ್ಪಿಂಗ್ ರೀತಿಯಲ್ಲಿ ವರ್ತಿಸುತ್ತದೆ. ಕಂಪೆನಿಯವರು ತಮಗೆ ಸೇರಿದ ಜಾಗ ಮಾತ್ರವಲ್ಲದೆ, ಎಕರೆಗಟ್ಟಲೆ ಸರ್ಕಾರಿ ಜಾಗಗಳನ್ನು ಅತಿಕ್ರಮಿಸಿ ಕ್ವಾರಿ ನಡೆಸುತ್ತಿದ್ದ ಪರಿಣಾಮ ಈ ಪ್ರದೇಶದಲ್ಲಿ ಹಳ್ಳಗಳಾಗಿವೆ.

Kadandale Issue (2)ನೀರಿನ ಒರತೆಯಿರುವ ತೋಡುಗಳ ನೀರು, ಇದಕ್ಕೆ ಸೇರಿರುವರಿಂದ ಈ ಪ್ರದೇಶದಲ್ಲಿ ಸರಾಗವಾಗಿ ನೀರು ಹರಿದಾಡುತ್ತದೆ. ಸದ್ಯ ಜಲ್ಲಿಹುಡಿ ಕೆಳಗಿನಿಂದ ನೀರು ಹರಿದಾಡುತ್ತಿದ್ದು, ಮಳೆಯ ಸಂದರ್ಭದಲ್ಲಿ ಮೇಲ್ಪದರ ತೆಲುವಾಗಿ ಅದರ ಮೇಲೆ ನಿಂತರೆ ಸ್ಪಂಜಿನ ಅಥವಾ ಸ್ಪ್ರಿಂಗ್‍ನ ರೀತಿಯ ಅನುಭವ ಕೊಡುತ್ತದೆ ಎಂದು ತಿಳಿಸಿದರು.

Kadandale Issue (3)

ಇನ್ನು ಈ ವಿಸ್ಮಯ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಿಂದ ಹರಿದಾಡಿದ್ದು, ಕುತೂಹಲದಿಂದಾಗಿ ಈ ಪ್ರದೇಶಕ್ಕೆ ಊರು ಹಾಗೂ ಪರವೂರಿನಿಂದ ಜನರು ಬರುತ್ತಿದ್ದಾರೆ. ಅಲ್ಲದೆ ಮೆದುವಾಗಿರುವ ನೆಲದ ಮೇಲೆ ನಡೆದಾಡುವುದು, ಕುಣಿಯುವುದು ಮಾಡುತ್ತಿದ್ದಾರೆ. 25 ಫೀಟ್ ಎತ್ತರದ ಹಳ್ಳದ ಮೇಲೆ ಪದರ, ಅದರ ಕೆಳಗೆ ನೀರು ಶೇಖರಣೆಯಾಗಿದೆ. ಮೇಲ್ಪದರ ಹೆಚ್ಚು ಮೆದುವಾದಲ್ಲಿ, ಇಲ್ಲವಾದಲ್ಲಿ ಪದರ ಹಾಗೂ ನೀರಿನಿಂದ ಗ್ಯಾಸ್ ಮಾದರಿಯಲ್ಲಿ ನೀರು ಚಿಮ್ಮಿದರೆ ಪ್ರಾಣಾಪಾಯಗಳಾಗುವ ಸಂಭವವಿದೆ. ಈ ಪ್ರದೇಶ ಜನ ಸಂಚಾರಕ್ಕೆ ಯೋಗ್ಯವಲ್ಲ. ಕುತೂಹಲಕ್ಕಾಗಿ ಪ್ರಾಣವನ್ನೇ ಬಲಿಕೊಡುವ ಹರಸಾಹಸವನ್ನು ಯಾರೂ ಮಾಡಬಾರದು ಎಂದು ಸಂತೋಷ್ ಶೆಟ್ಟಿ ಕಡಂದಲೆ ವಿನಂತಿಸಿದ್ದಾರೆ.

By Suddi9

Leave a Reply

Your email address will not be published. Required fields are marked *