ಮೂಡುಬಿದಿರೆ: ಜೀವದಯಾಷ್ಟಮಿ ದಿನವಾದ ಬುಧವಾರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ, ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್ ಮೊದಲಾದ ರಾಜ್ಯಗಳಿಂದ ಆಗಮಿಸಿದ ಶ್ರಾವಕ, ಶ್ರಾವಿಕೆಯರು ಮೂಡುಬಿದಿರೆಯ 18 ಬಸದಿಗಳ ದರ್ಶನಗೈದರು.
ಮೂಡುಬಿದಿರೆಯ 18 ಜಿನಮಂದಿರಗಳು ಹಾಗೂ ಧ್ಯಾನ ಸೂತ್ರಂ’ ಕಿರುಪುಸ್ತಿಕೆಯನ್ನು ಶ್ರೀ ಜೈನಮಠದಲ್ಲಿ ಅನಾವರಣಗೊಳಿಸಿ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅನಾವರಣಗೊಳಿಸಿದರು. ಸಕಲ ಜೀವರಾಶಿಗಳ ಕುರಿತು ದಯೆ, ಆನುಕಂಪ, ಕರುಣೆ ತೋರುವುದೇ ಮಾನವ ಜೀವನದ ಪರಮ ಉದ್ದೇಶ ಎಂದು ನುಡಿದರು.

Jeevadayastami)

ಭಟ್ಟಾರಕ ಸ್ವಾಮೀಜಿ ಅವರು ಮುಂಜಾನೆ ಗುರುಗಳ ಬಸದಿಯಲ್ಲಿ ಗುರುಪೂಜೆ, ಅಭಿಷೇಕ ನೆರವೇರಿಸಿದರು. ಸಾಗರ ತಾಲೂಕಿನ ಹಾವಿಗೆ ಗ್ರಾಮಸ್ಥರು ಭಟ್ಟಾರಕ ಸ್ವಾಮೀಜಿಯವರ ಪಾದಪೂಜೆ ನಡೆಸಿದರು. ಶ್ರೀ ಜೈನಮಠದಲ್ಲಿ ಪಾಶ್ರ್ವನಾಥ ಸಾಮಿಗೆ ಪೂಜೆ, ಕೂಷ್ಮಾಂಡಿನಿ ಮಾತೆಗೆ ಶೋಡಷೋಪಚಾರ ನಡೆಸಿದ ಬಳಿಕ ಸಾಗರ ತಾಲೂಕಿನ ಹಾವಿಗೆ ಗ್ರಾಮಸ್ಥರು ಭಟ್ಟಾರಕ ಸ್ವಾಮೀಜಿಯವರ ಪಾದಪೂಜೆಗೈದರು. ಭಟ್ಟಾರಕ ಸ್ವಾಮೀಜಿ ಗುರುಗಳ ಬಸದಿ ಸೇರಿದಂತೆ 18 ಬಸದಿಗಳ ದರ್ಶನಗೈದರು. ಮಹಾವೀರ ಭವನದಲ್ಲಿ ಸಂಘ ಸಂತರ್ಪಣೆ ಏರ್ಪಡಿಸಲಾಗಿತ್ತು.
ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್, ಪುಷ್ಪರಾಜ ಶೆಟ್ಟಿ ಮಂಗಳೂರು, ಧನಕೀರ್ತಿ ಬಲಿಪ, ಜಯರಾಜ ಕಂಬ್ಳಿ, ಜೀವಂಧರ ಶೆಟ್ಟಿ ಪುತ್ತೂರು ಸಹಿತ ಗಣ್ಯರು ಉಪಸ್ಥಿತರಿದ್ದರು.
ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುಧೇಶ್‍ಕುಮಾರ್ ಸ್ವಾಗತಿಸಿ ಸ್ವಸ್ತಿ ಶ್ರೀ ಪ.ಪೂ. ಕಾಲೇಜಿನ ಉಪನ್ಯಾಸಕ ನೇಮಿರಾಜ ಶೆಟ್ಟಿ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *