ಮುಂಬಯಿ: ಮಹಾರಾಷ್ಟ್ರ ರಾಜ್ಯದ ರಾಯಗಾಢ ಜಿಲ್ಲೆಯ ರಾಸಾಯನಿ ಮೋಹಪಡ ನಗರದ ನಿವಾಸಿ, ತುಳು ಕನ್ನಡಿಗ ಸಮಾಜ ಸೇವಕ ಯಾದವ್ ರಾಮ ಸುವರ್ಣ ಪಡೀಲ್ ಇವರಿಗೆ ರಾಯಗಾಢ ಪರಿಸರದಲ್ಲಿನ ಅನನ್ಯ ಸಮಾಜ ಸೇವೆಗಾಗಿ ಯಾದವ್ ಸುವರ್ಣರಿಗೆ ಉತ್ಕೃಷ್ಟ ಸಾಮಾಜಿಕ ಕಾರ್ಯಕರ್ತ ಬಿರುದು ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ಇಲ್ಲಿನ ಕಪೋಲಿ ರಾಜಶ್ರೀ ಸಾಹು ಮಹಾರಾಜಾ ಸಭಾಂಗಣದಲ್ಲಿ ಅ.15 ಸೋಮವಾರದಂದು ಸವಾದ್ ಮರಾಠಿ ವಾಹಿನಿಯ ದ್ವಿತೀಯ ವಾರ್ಷಿಕ ಜೇಷ್ಠ ನಾಗರಿಕ ದಿನಾಚರಣೆ ಸಂಭ್ರಮಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷದ (ಎನ್‍ಸಿಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನಿಲ್ ತಟ್ಕ್ಕರೇ ಸುವರ್ಣರಿಗೆ ಉತ್ಕೃಷ್ಟ ಸಾಮಾಜಿಕ ಕಾರ್ಯಕರ್ತ ಬಿರುದು ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸುವರ್ಣರ ಪತ್ನಿ, ಸುರೇಶ್ ಲಾಡ್, ಬಾಬು ಪೋತೆ, ಅಭಿನೇತ ಶಶಾಂಕ್ ಶೇಲಾರ್ ಮತ್ತಿತರು ಉಪಸ್ಥಿತರಿದ್ದರು.

