ಬಂಟ್ವಾಳ: ನಗರಾಭಿವೃದ್ದಿ ಖಾತೆ ಸಚಿವ ಯು.ಟಿ.ಖಾದರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಫರಂಗಿಪೇಟೆಯ ಟುಡೇ ಫೌಂಡೇಶನ್ ವತಿಯಿಂದ ಬಂಟ್ವಾಳದ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

hannu hampalu vitharane
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಫ್. ಉಮ್ಮರ್ ಫಾರೂಕ್ ಅವರ ನೇತೃತ್ವದಲ್ಲಿ ಟುಡೇ ಫೌಂಡೇಶನ್‍ನ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ಇದೇ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮ್ಮರ್ ಫಾರೂಕ್ ಅವರು, ಎಲ್ಲಾ ಜಾತಿ, ಧರ್ಮದ ನಾಯಕನಾಗಿ ಸೇವೆ ಸಲ್ಲಿಸಿ ಹೊರಹೊಮ್ಮಿರುವ ಯು.ಟಿ.ಖಾದರ್ ಜಿಲ್ಲೆಗೆ ಗೌರವ ತರುವಂತಹ ಕೆಲಸವನ್ನು ಮಾಡಿದ್ದಾರೆ. ಆರೋಗ್ಯ ಇಲಾಖೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಇದೀಗ ವಸತಿ ಮತ್ತು ನಗರಾಭಿವೃದ್ದಿ ಇಲಾಖೆಯ ಸಚಿವರಾಗಿ ಬಡವರ ಪರ ಅನೇಕ ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಖಾದರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿ, ಬಡವರ ಪರ ಕೆಲಸ ಮಾಡುವ ಶಕ್ತಿ ದೇವರು ಕರುಣಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಮಾಜಿ ಉಪಾಧ್ಯಕ್ಷ ಹಾಸೀರ್ ಪೇರಿಮಾರ್, ತಾ.ಪಂ.ಮಾಜಿ ಸದಸ್ಯ ಆಸೀಫ್ ಇಕ್ಬಾಲ್, ಪ್ರಮುಖರಾದ ಇಕ್ಬಾಲ್ ಸುಜೀರ್, ರಫೀಕ್ ಪೇರಿಮಾರ್, ಇಮ್ತಿಯಾಝ್ ತುಂಬೆ, ರಶೀದ್ ತುಂಬೆ, ಪ್ರವೀಣ್ ತುಂಬೆ, ಮಜೀದ್ ಫರಂಗಿಪೇಟೆ, ರಿಯಾಝ್ ಕುಂಪಣಮಜಲು, ಶೌಕತ್ ಪಾಡಿ, ಇಬ್ರಾಹಿಂ ವಳವೂರು, ಮಜೀದ್ ಪೇರಿಮಾರ್, ಸಲೀಂ ಮಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *