ಮುಂಬಯಿ,: ಬಿಲ್ಲವ ಅಸೋಸಿಯೇಶನ್ ಮುಂಬಯಿ ಇದರ ಯುವಾಭ್ಯುದಯ ಉಪಸಮಿತಿ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ 2018ನೇ ಸಾಲಿನ ವಾರ್ಷಿಕ ಕಾಂತಾಬಾರೆ-ಬೂದಬಾರೆ ಒಳಾಂಗಣ ಸ್ಪರ್ಧೆ ನಡೆಯಿತು.

Billawar Kantabhare Budhabare (1)

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಈ ಸ್ಪಧೆಯು ಭಾರತ್ ಬ್ಯಾಂಕ್ ಮಾಜಿ ನಿರ್ದೇಶಕ, ಬಿಜೆಪಿ ಧುರೀಣ ಎಲ್.ವಿ ಅವಿೂನ್ ಕೋಟಿ-ಚೆನ್ನಯ ಹಾಗೂ ಕಾಂತಾಬಾರೆ-ಬೂದಬಾರೆ ಅವರ ಭಾವಚಿತ್ರಕ್ಕೆ ಪುಷ್ಪಗುಪ್ಛವನ್ನಿತ್ತು ದೀಪ ಬೆಳಗಿಸಿ ಸಂಕೇತಿಕವಾಗಿ ಸ್ಪರ್ಧೆಗಳನ್ನು ಉದ್ಘಾಟಿಸಿದರು.

Billawar Kantabhare Budhabare (2)

ಬಿಲ್ಲವರ ಅಸೋಸಿಯೇಶನ್‍ನ ಮಾಜಿ ಗೌ|ಪ್ರ| ಕೋಶಾಧಿಕಾರಿ ಎನ್.ಎಂ ಸನೀಲ್ ಮತ್ತು ಹಾಲಿ ಉಪಾಧ್ಯಕ್ಷ ಹರೀಶ್ ಜಿ.ಅವಿೂನ್ ಟೇಬಲ್ ಟೆನಿಸ್ ಆಟವನ್ನಾಡಿ, ಅಧ್ಯಕ್ಷ ಚಂದ್ರಶೇಖರ ಪೂಜಾರಿ ಮತ್ತು ಉಪಾಧ್ಯಕ್ಷ ಶ್ರೀನಿವಾಸ ಆರ್.ಕರ್ಕೇರ ಅವರು ಕೇರಂ ಆಟವನ್ನಾಡಿ ಸ್ಪರ್ಧೆಗಳನ್ನು ಉದ್ಘಾಟಿಸಿದರು.

Billawar Kantabhare Budhabare (3)

ಕಾರ್ಯಕ್ರಮದಲ್ಲಿ ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮಹೇಶ್ ಸಿ. ಕಾರ್ಕಳ, ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ, ನಿಲೇಶ್ ಪೂಜಾರಿ ಪಲಿಮಾರ್, ಭವನದ ವ್ಯವಸ್ಥಾಪಕ ಭಾಸ್ಕರ್ ಟಿ.ಪೂಜಾರಿ ಸೇರಿದಂತೆ ಯುವ ವಿಭಾಗೀಯ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಬಳಿಕ ಟೇಬಲ್ ಟೆನಿಸ್, ಕೆರಂ, ಚೆಸ್, ಸಂಗೀತ, ಚಿತ್ರಕಲೆ, ರಂಗೋಲಿ, ಲ್ಯಾಂಡ್‍ಸ್ಕೇಪ್ ಇತ್ಯಾದಿ ಸ್ಪರ್ಧೆಗಳು ನಡೆಯಿತು.

ಕಾರ್ಯಕ್ರಮವನ್ನು ಕಾರ್ಯದರ್ಶಿ ಉಮೇಶ್ ಎನ್.ಕೋಟ್ಯಾನ್ ನಿರೂಪಿಸಿ ವಂದಿಸಿದರು. ರವಿ ಎಸ್.ಸನೀಲ್ ಸ್ಪರ್ಧೆಗಳನ್ನು ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *