ಮಂಗಳೂರು; ತುಳು ರಂಗಭೂಮಿಯಲ್ಲಿ 20 ವರ್ಷಗಳಿಂದ ಯುಗಪುರುಷದ ಜತೆ ತುಳು ನಾಟಕ ಪ್ರದರ್ಶನದೊಂದಿಗೆ ರಂಗ ಭೂಮಿಯ ಸರ್ವ ಮಜಲುಗಳಲ್ಲಿ ಕ್ರಿಯಾಶೀಲವಾಗಿರುವ ಕಿನ್ನಿಗೋಳಿಯ ವಿಜಯಾ ಕಲಾವಿದರು ನಾಟಕ ತಂಡದ ಹರೀಶ್ ಪಡುಬಿದ್ರಿಯವರ ರಚನೆಯ ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶನದ ಬಿಲೆ ಕಟ್ಟರೆ ಆವಂದಿನ ತುಳು ನಾಟಕದ 50ರ ಸಂಭ್ರಮ ಸೆ.30ರ ಸಂಜೆ 5ರಿಂದ ಮಂಗಳೂರು ಪುರಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಪೊರ್ಲು ಕಲಾವಿದರ ಸಹಭಾಗಿತ್ವದಲ್ಲಿ ಹಾಗೂ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣರ ಆಶೀರ್ವಚನದಲ್ಲಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್‍ರ ಅಧ್ಯಕ್ಷತೆಯಲ್ಲಿ ಮತ್ತು ಸಂಸದ ನಳಿನ್ ಕುಮಾರ್ ಕಲಾಪೋಷಕರನ್ನು ಗೌರವಿಸಲಿದ್ದಾರೆ.
ವಿಶ್ವ ಬಂಟರ ಸಂಘಗಳ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕಲಾವಿದರನ್ನು ಗೌರವಿಸಲಿದ್ದು, ಮುಂಬೈ ಬಂಟರ ಸಂಘದ ಮಾತೃಭೂಮಿ ಕೋ-ಆಪರೇಟಿವ್ ಬ್ಯಾಂಕ್ ಚೇರ್‍ಮ್ಯಾನ್ ಮುಂಡ್ಕೂರು ರತ್ನಾಕರ ಶೆಟ್ಟಿ ಪ್ರತಿಭಾ ಪುರಸ್ಕಾರ ನಡೆಸಲಿದ್ದಾರೆ. ಕೊಡೆತ್ತೂರು ಭುವನಾಭಿರಾಮ ಉಡುಪ ಕಲಾವಿದರ ಬಗ್ಗೆ ವಿಸ್ತಾರವಾಗಿ ಮಾತನಾಡಲಿದ್ದು, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ನಾಟಕ ಪ್ರದರ್ಶನದ ಮೊದಲು ಪ್ರಕಾಶ್ ಕಿನ್ನಿಗೋಳಿ, ಭಗವಾನ್ ಸುರತ್ಕಲ್, ಚಿತ್ರಲೇಖಾ ಭಗವಾನ್‍ರಿಂದ ರಸಮಂಜರಿ ನಡೆಯಲಿದ್ದು, ಬಳಿಕ ನಾಟಕದ ಉಚಿತ ಪ್ರದರ್ಶನ ನಡೆಯಲಿದೆ.
ಈ ನಾಟಕದಲ್ಲಿ ಯಕ್ಷಧ್ರ್ರುವ ಪಟ್ಲ ಸತೀಶ್ ಶೆಟ್ಟಿಯವರು ಹಾಡೊಂದನ್ನು ಹಾಡಿದ್ದಾರೆ. ಈ ಹಾಡನ್ನು 50ರ ಸಂಭ್ರಮದ ಉಚಿತ ಪ್ರದರ್ಶನದಲ್ಲಿ ನಾಟಕದ ನಡುವೆ ನೇರವಾಗಿ ಎಲ್ಲರ ಮುಂದೆ ಹಾಡಲಿದ್ದಾರೆ.
ಇದೇ ಸಂದರ್ಭ ಬಿಲೆ ಕಟ್ಟರೆ ಆವಂದಿನ ನಾಟಕದ ಪ್ರಥಮ ಪ್ರದರ್ಶನದ ಪ್ರಯೋಜಕರಾದ ಪಕ್ಷಿಕೆರೆ ಪಂಜ ಕೊೈಕುಡೆಯ ಹರಿಪಾದ ಯುವಕ ಸಂಘದವರನ್ನು ಗೌರವಿಸಲಾಗುವುದು.
ಗೌರವಾಧ್ಯಕ್ಷರಾದ ಕೊಡೆತ್ತೂರು ಭುವನಾಭಿರಾಮ ಉಡುಪ, ಸಂಚಾಲಕರಾದ ಸಾಯಿನಾಥ ಶೆಟ್ಟಿ ಮುಂಡ್ಕೂರು, ಭಾಗವತರು ಪಟ್ಲ ಸತೀಶ್ ಶೆಟ್ಟಿ, ಅಧ್ಯಕ್ಷರಾದ ಶರತ್ ಶೆಟ್ಟಿ, ಕಾರ್ಯದರ್ಶಿ ಲಕ್ಷ್ಮಣ್ ಬಿ.ಬಿ ಹಾಗೂ ನಿರ್ವಾಹಕರಾದ ಸುಧಾಕರ ಸಾಲ್ಯಾನ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
,
