ಮೂಡುಬಿದಿರೆ: ಜಗತ್ತಿನ ಎಲ್ಲಾ ಜೀವಿಗಳನ್ನು ತನ್ನಆತ್ಮವೆಂದೇ ತಿಳಿ ಎಂಬ ಉಪನಿಷತ್ತಿನತತ್ವವನ್ನುಅಕ್ಷರಶಃ ಪಾಲಿಸಿದವರು ನಾರಾಯಣ ಗುರುಗಳು. ನಾರಾಯಣ ಗುರುಗಳದ್ದು ಎಲ್ಲರನ್ನು ಒಳಗೊಳ್ಳುವ ಚಿಂತನೆ, ನಾರಾಯಣಗುರು ನಾಡುಕಂಡ ಅಪೂರ್ವದಾರ್ಶನಿಕ.ತನ್ನಲ್ಲೆದೇವನನ್ನು ಕಾಣುವ ಅದ್ವೈತ್ಯವಾದ ಅವರದ್ದು. ತನ್ನಲ್ಲೂ ಇತರರಲ್ಲೂ ದೇವರನ್ನು ಕಾಣುವ ಮಹಾ ಗುಣ ಅವರದ್ದು ಎಂದು ಲೇಖಕ ಅರವಿಂದಚೊಕ್ಕಾಡಿ ಹೇಳಿದರು.

ಯುವವಾಹಿನಿ ಮೂಡಬಿದಿರೆ ಘಟಕದಿಂದ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ ಮೂಡಬಿದಿರೆಯಲ್ಲಿ ಶಾಲಾ ಹಾಗೂ ಕಾಲೇಜು ವಿಧ್ಯಾರ್ಥಿಗಳಿಗೆ ನಾರಾಯಣ ಗುರುಗಳ ಚಿಂತನೆಯ ಕುರಿತು ನಡೆದ `ಅರಿವು-2018′ ಎಂಬ ವಿಚಾರ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಉದ್ಯಮಿ ಭಾನುಮತಿ ಶೀನಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಯುವವಾಹಿನಿ ಮೂಡಬಿದಿರೆ ಘಟಕದ ಅಧ್ಯಕ್ಷ ರಾಜೇಶ್‍ಡಿ.ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಬ್ರಹ್ಮ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ರವೀಂದ್ರಎಮ್ ಸುವರ್ಣ , ಮಾಜಿ ಅಧ್ಯಕ್ಷ ಪದ್ಮಯ ಸುವರ್ಣ,ಲಕ್ಷಣ್ ವಿ. ಕೋಟ್ಯಾನ್ ,ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್ , ನಾರಾಯಣಗುರು ಸೇವಾದಳದ ಅಧ್ಯಕ್ಷ ರಮೇಶ್ ಅಮಿನ್ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು.
ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ಆಶಯ ಭಾಷಣ ಮಾಡಿದರು.
ಕಾರ್ಯಕ್ರಮವನ್ನು ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಸುದೀಪ್ ಬುನ್ನನ್ ನಿರೂಪಿಸಿದರು. ಕಾರ್ಯದರ್ಶಿ ರಾಮ್‍ಕುಮಾರ್ ವಂದಿಸಿದರು.
