ಕೈಕಂಬ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಯೋಜಿಸಿದ್ದ ನರೇಂದ್ರ ಮೋದಿಯವರ ರಾಷ್ಟ್ರವ್ಯಾಪ್ತಿ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವೀರ ಶಿವಾಜಿ ಶಾಖೆ, ಗಂಜಿಮಠ ಇವರ ವತಿಯಿಂದ ಗಂಜಿಮಠ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗ ಸಂಚಾಲಕ ಭುಜಂಗ ಕುಲಾಲ್,ಎಡಪದವು ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ, ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ ,ಗ್ರಾಮ ಪಂಚಾಯತ್ ಸದಸ್ಯ ಸಂದೀಪ್ ಶೆಟ್ಟಿ ಕುಕ್ಕಟ್ಟೆ, ಪ್ರಖಂಡ ಗೋರಕ್ಷಾ ಪ್ರಮುಖ್ ರಾಜೇಶ್ ಅಂಚನ್ ಗಂಜಿಮಠ, ಘಟಕದ ಸಂಚಾಲಕ ಚಂದ್ರಹಾಸ ಅಳಿಕೆ ಮತ್ತು ವೀರ ಶಿವಾಜಿ ಘಟಕದ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
