ಮುಂಬಯಿ: ಮಹಾನಗರದಲ್ಲಿನ ಹಿರಿಯ ರಾಜಕಾರಣಿ ಲಕ್ಷಣ್ ಸಿ.ಪೂಜಾರಿ ಅವರನ್ನು ರಾಷ್ಟ್ರವಾದಿ ಕಾಂಗ್ರೇಸ್ ಪಾರ್ಟಿ (ಎನ್‍ಸಿಪಿ) ಇದರ ಮುಂಬಯಿ ವಲಯದ ಸಮಿತಿಯ ಹಿರಿಯ ಉಪಾಧ್ಯಕ್ಷರಾಗಿ ಪಕ್ಷದ ಪಾರ್ಲಿಮೆಂಟ್ ಬೋರ್ಡ್ ಪುನಾರಯ್ಕೆ ಗೊಳಿಸಿದೆ. ಸುಮಾರು ಆರು ತಾಲೂಕುಗಳ ಅಧೀನದ ದಕ್ಷಿಣ ಮುಂಬಯಿ ಜಿಲ್ಲಾ (ಪ್ರಶಾಸನ)ದ ನಿರೀಕ್ಷಕ ಹುದ್ದೆಯನ್ನೂ ಪ್ರದಾನಿಸಲಾಗಿದೆ ಎಂದು ಎನ್‍ಸಿಪಿ ಮುಂಬಯಿ ಪ್ರದೇಶ ಸಮಿತಿ ಅಧ್ಯಕ್ಷ ಸಚಿನ್ ಅಹಿರೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Laxman Poojary NCP 1
ಇವರು ರಾಷ್ಟ್ರವಾದಿ ಕಾಂಗ್ರೇಸ್ ಪಾರ್ಟಿಯ ಸರ್ವೋಚ್ಛ ನಾಯಕ, ಮಾಜಿ ಕೇಂದ್ರ ಸಚಿವ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ನಿಕಟವರ್ತಿ ಆಗಿರುವ ಲಕ್ಷ್ಮಣ್ ಪೂಜಾರಿ ಎನ್‍ಸಿಪಿ ಸ್ಥಾಪನೆಯ ದಿನದಿಂದಲೇ ಪಕ್ಷದಲ್ಲಿ ಸಕ್ರೀಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪಕ್ಷದ ಪದಾಧಿಕಾರಿಗಳ ಪ್ರಥಮ ಅವಧಿಯಲ್ಲೇ ಪ್ರಧಾನ ಕಾರ್ಯದರ್ಶಿ ಆಗಿ, ನಂತರ ಸತತ ಐದು ಅವಧಿಗಳಲ್ಲಿ ಉಪಾಧ್ಯಕ್ಷರಾಗಿಯೇ ನೇಮಕಗೊಂಡಿದ್ದಾರೆ. ಸದ್ಯ ಎನ್‍ಸಿಪಿಯಲ್ಲಿ ಉನ್ನತ ಹುದ್ದೆಯನ್ನು ಹೊಂದಿದ ತುಳು ಕನ್ನಡಿಗರಲ್ಲಿ ಲಕ್ಷಣ್ ಪೂಜಾರಿ ಕೂಡ ಒಬ್ಬರಾಗಿದ್ದಾರೆ.

Laxman Poojary NCP 3

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮೂಲ್ಕಿ ಚಿತ್ರಾಪುರ ಮೂಲತಃ ಚೆನ್ನಪ್ಪ ಪೂಜಾರಿ ಮತ್ತು ಜಾನಕಿ ಪೂಜಾರಿ ದಂಪತಿ ಸುಪುತ್ರರಾದ ಲಕ್ಷ್ಮಣ್ ಪೂಜಾರಿ ಅವರು ಸರಳ ಸಜ್ಜನಿಕೆಯ ಅನುಭವೀ ರಾಜರಣಿ ಆಗಿದ್ದಾರೆ. ಇವರು ಸದ್ದಿಲ್ಲದೆ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಮೂಲತಃ ಕಾಂಗ್ರೇಸ್ ಪಕ್ಷದಲ್ಲಿದ್ದು 1997ರ ಬಿಎಂಸಿ ಚುನಾವಣೆಯಲ್ಲಿ ನಗರ ಸೇವಕ ಸ್ಥಾನಕ್ಕೆ ಅಭ್ಯಥಿರ್ü ಆಗಿದ್ದರು. ಮೂಡಾ ಸದಸ್ಯರಾಗಿ, ಪಶ್ಚಿಮ ಪ್ರಾದೇಶಿಕ ರೈಲ್ವೇ ಮಂಡಳಿ ಸದಸ್ಯರಾಗಿ, ಚಿತ್ರಾಪು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾಗಿ, ಮೂಲ್ಕಿ ಬಿಲ್ಲವ ಸಂಘ ಮುಂಬಯಿ ಸಮಿತಿ ಉಪಾಧ್ಯಕ್ಷರಾಗಿ ಶ್ರಮಿಸಿರುವರು.

By suddi9

Leave a Reply

Your email address will not be published. Required fields are marked *