ಮುಂಬಯಿ: ನಗರದ ಹೆಸರಾಂತ ಸಮಾಜ ಸೇವಕ ಸಂಜೀವ ಕುಂಟಾಡಿ ಅವರ ಧರ್ಮಪತ್ನಿ ಸುಶೀಲಾ ಸಂಜೀವ ಕುಂಟಾಡಿ (79.) ಸೆ.01 ಶನಿವಾರ ಮುಂಜಾನೆ ಅಲ್ಪ ಕಾಲದ ಅನಾರೋಗ್ಯದಿಂದ ಸಾಂತಕ್ರೂಜ್ ಪೂರ್ವದ ವಕೋಲಾ ಬ್ರಿಡ್ಜ್ ಅಲ್ಲಿನ ಓಂ ಕೋ.ಆಪರೇಟಿವ್ ಹೌಸಿಂಗ್ ಸೊಸೈಟಿಯ ಸುಪುತ್ರಿಯ ನಿವಾಸದಲ್ಲಿ ನಿಧನರಾದರು.

ಮೃತರು ಮೂಲತಃ ಮಂಗಳೂರು ಬಜ್ಪೆ ದೊಡ್ಡಿಕಟ್ಟಾದವರು. ದಾದರ್‍ನ ನೇಶನಲ್ ವೇಸ್ಕೇಲ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ನಿವೃತ್ತರಾಗಿದ್ದಾರೆ. ಬಳಿಕ ಅವರು ಸಂಜೀವರ ಅಂಧೇರಿಯಲ್ಲಿನ ಆಶೀರ್ವಾದ್ ಮೆಡಿಕಲ್‍ನಲ್ಲಿ ಶ್ರಮಿಸುತ್ತಿದ್ದರು. ಒಂದು ಗಂಡು, ಎರಡು ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
