ಲೈಂಗಿಕವಾಗಿ ದೌರ್ಜನ್ಯ ನಡೆಸಿ ಮಕ್ಕಳನ್ನು ಕೊಂದಿದ್ದಾನೆಂದು ಸಿಬಿಐ ಅವನ ವಿರುದ್ಧ ಆರೋಪಿಸಿತ್ತು. 2006 ಡಿಸೆಂಬರ್‌ನಲ್ಲಿ ರಿಂಪಾ ಹಾಲ್ಡರ್ ಪ್ರಕರಣ ಬೆಳಕಿಗೆ ಬಂದಿತ್ತು. ನಾಪತ್ತೆಯಾದ ಬಾಲಕಿಯನ್ನು ಕೋಲಿ ಹತ್ಯೆ ಮಾಡಿದ್ದ.. ಈ ಪ್ರಕರಣದ ತನಿಖೆ ನಡೆಸಿದ ಸಂದರ್ಭದಲ್ಲಿ ಇನ್ನೂ ಅನೇಕ ಮಕ್ಕಳು ಹತ್ಯೆಯಾಗಿರುವುದು ಬೆಳಕಿಗೆ ಬಂದಿತ್ತು. ಮಕ್ಕಳ ಮೂಳೆಯ ಅವಶೇಷಗಳು ಮನೆಯ ಪಕ್ಕದಲ್ಲಿದ್ದ ಚರಂಡಿಯ ಪಕ್ಕದಲ್ಲಿ ಪತ್ತೆಯಾಗಿತ್ತು.
ಕೋಲಿಗೆ ಕೆಳ ಕೋರ್ಟ್ ಮರಣದಂಡನೆ ಶಿಕ್ಷೆ ನೀಡಿತು ಮತ್ತು ಅಲಹಾಬಾದ್ ಹೈಕೋರ್ಟ್ ಅದನ್ನು ಎತ್ತಿಹಿಡಿಯಿತು ಮತ್ತು ಸುಪ್ರೀಂಕೋರ್ಟ್ 2011ರ ಫೆಬ್ರವರಿ 15ರಂದು ಅದನ್ನು ದೃಢಪಡಿಸಿತು. ಕೋಲಿ ಸರಣಿ ಹತ್ಯೆಕೋರನಾಗಿದ್ದು, ಅವನಿಗೆ ಯಾವುದೇ ಕರುಣೆ ತೋರಿಸಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.ಕೋಲಿ ವಿರುದ್ಧ 16 ಪ್ರಕರಣಗಳು ದಾಖಲಾಗಿದ್ದು,ಅವನ ಮಾಲೀಕ ಮಣಿಂದರ್ ಸಿಂಗ್ ಪಾಂಧರ್‌ಗೆ ರಿಂಪಾ ಹಾಲ್ಡರ್ ಪ್ರಕರಣದಲ್ಲಿ ವಿಧಿಸಿದ ಮರಣದಂಡನೆ ಶಿಕ್ಷೆಯನ್ನು ರದ್ದುಮಾಡಿ ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿತ್ತು.

