ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆ ಬಾಲಕಿಯರ ತಂಡವು 17ರ ವಯೋಮಾನ ವಿಭಾಗದಲ್ಲಿ ಪ್ರಥಮ ಸ್ಥಾನ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದೆ. ಮುಖ್ಯಶಿಕ್ಷಕಿ ಭಗಿನಿ ನವೀನ ಎ.ಸಿ., ದೈಹಿಕ ಶಿಕ್ಷಣ ಶಿಕ್ಷಕಿ ಎಲೈಜಾ ಡಿಸೋಜ, ಉಪನ್ಯಾಸಕ ಸುರೇಶ ನಂದೊಟ್ಟು, ವಿದ್ಯಾರ್ಥಿಗಳಾದ ಹರ್ಷಿತಾ, ಅನನ್ಯ, ಅಶ್ಫಿಯಾ, ಮುನೀರ ಭಾನು, ಫರೀದ, ಸಮ್ರೀನಾ, ಧಾತ್ರಿ, ಗ್ಲೆನಿಟ, ರಮ್ಲತ್ ಇದ್ದಾರೆ.
