ವಿಟ್ಲ: ಮೆಸ್ಕಾಂ ಉಪವಿಭಾಗದ ಉಕ್ಕುಡ ಶಾಖೆಯಲ್ಲಿ ಲೈನ್‍ಮ್ಯಾನ್ ಆಗಿದ್ದ ಬಾಲಕೃಷ್ಣ ಗೌಡ ಇವರು ವಿಟ್ಲ ಶಾಖೆಗೆ, ಕನ್ಯಾನ ಶಾಖೆಯಲ್ಲಿ ಮೆಕ್ಯಾನಿಕ್ ದರ್ಜೆ2 ನೌಕರರಾಗಿದ್ದ ಪ್ರಭಾಕರ ನಾಯ್ಕರವರು ಬಂಟ್ವಾಳ ಮೆಸ್ಕಾಂ ಎಲ್ ಟಿ ರೇಟಿಂಗ್‍ಗೆ ವರ್ಗಾವಣೆ ಗೊಂಡಿದ್ದು ಅವರನ್ನು ಕನ್ಯಾನ ಮೆಸ್ಕಾಂ ಶಾಖೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ವಿಟ್ಲ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರವೀಣ ಜೋಷಿ, ಸಹಾಯಕ ಇಂಜಿನೀಯರ್ ಭರತ್ ಸಿ ಎನ, ಹಿರಿಯ ಸಹಾಯಕ ನೆಲ್ಸನ್ ನವೀನ್ ಕುಮಾರ್, ವಿಟ್ಲ ಶಾಖಾಧಿಕಾರಿ ಸತೀಶ ಸಪಲ್ಯ, ಕನ್ಯಾನ ಶಾಖಾಧಿಕಾರಿ ಕಾರ್ತಿಕ್ ಸಿ ಆರ್ ಉಪಸ್ಥಿತರಿದ್ದರು. ಉಕ್ಕುಡ ಶಾಖಾಧಿಕಾರಿ ಆನಂದ ಸ್ವಾಗತಿಸಿದರು. ಓವರ್‍ಸೀಯರ್ ಚಂದ್ರನಾಥ ಬಂಗೇರ ವಂದಿಸಿದರು. ವಿಟ್ಲ ಕೆ ಪಿ ಟಿ ಸಿ ಎಲ್ ನೌಕರರ ಸಂಘದ ಅಧ್ಯಕ್ಷ ಪದ್ಮನಾಭ ಗೌಡ ಅಡ್ಯೇಯಿ ನಿರೂಪಿಸಿದರು.
