ಸುದ್ದಿ9ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಂತರ್ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ‘ಯೌವನ ಜೋಪಾನ’ ಕಾರ್ಯಕ್ರಮವನ್ನು ಪ್ರಾಂಶುಪಾಲ ಪ್ರೊ.ಕೆ.ಪಿ.ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ಸಮಾಲೋಚಕಿ ಲವಿನಾ ಡಿಸೋಜ, ಪ್ರೊ.ಸುರೇಶ ವಿಟ್ಲ, ಪ್ರೊ.ಕೆ.ಶಶಿಕಲಾ, ಗುರುನಾಥ್, ಮಮತಾ, ಶಿವಲಿಂಗಪ್ಪ ಮತ್ತಿತರರು ಇದ್ದರು.

