ವಿಟ್ಲ: ವಿಟ್ಲ ಯುವಕ ಮಂಡಲ ಇದರ ಆಶ್ರಯದಲ್ಲಿ ನಡೆದ 41ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಉದ್ಘಾಟಿಸಿದರು. ಉಪಾಧ್ಯಕ್ಷ ಜಯಂತ ನಾಯ್ಕ, ಮಾದರಿ ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಮತ್ತು ಉದ್ಯಮಿ ಶ್ರೀಧರ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

mosaru kudike
ಕಾರ್ಯದರ್ಶಿ ಜನಾರ್ಧನ ಪದ್ಮಶಾಲಿ ಮತ್ತು ಕೋಶಾಧಿಕಾರಿ ಗಂಗಾಧರ ಸಹಕರಿಸಿದರು.
ಕಾರ್ಯಕ್ರಮವನ್ನು ಯುವಕ ಮಂಡಲದ ಅಧ್ಯಕ್ಷ ಸದಾನಂದ ಗೌಡ ಸೇರಾಜೆ ಸ್ವಾಗತಿಸಿದರು. ಗೌರವಾಧ್ಯಕ್ಷ ಸುದರ್ಶನ ಪಡಿಯಾರ್ ವಂದಿಸಿದರು. ಮಾಜಿ ಆದ್ಯಕ್ಷ ಲೋಕರಾಜ ವಿ ಎಸ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸುಮಾರು 200 ಮಕ್ಕಳು ಶ್ರೀಕೃಷ್ಣ ವೇಶಧಾರಿಗಳಾಗಿ ಸ್ಪರ್ಧಿಸಿದ್ದರು.

By Suddi9

Leave a Reply

Your email address will not be published. Required fields are marked *