ಅಡ್ಡೂರು : ರಾಜಕಾರಣಿ ಅಥವಾ ನನ್ನಂತಹ ಸರ್ಕಾರಿ ಉದ್ಯೋಗಿ ಇಂದು ಹಿಂದೂವೆಂದು ಅಭಿಮಾನದಿಂದ ಧೈರ್ಯದಿಂದ ಮಾತನಾಡಲು ಸಾಧ್ಯವಾಗದ ಕಾಲಘಟ್ಟದಲ್ಲಿ ನಿಂತು ಧರ್ಮದ ಬಗ್ಗೆ ಮಾತನಾಡುತ್ತಿದ್ದೇವೆ. ಹಾಗೇನಾದರೂ ಮಾತನಾಡಿದರೆ ನಾನು ಮತಾಂಧೆ ಅಥವಾ ಕಮ್ಯುನಲ್ ಎಂದು ಕರೆಸಿಕೊಳ್ಳುತ್ತೇನೆ ಎಂದು ಮಂಗಳೂರು ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಮಂಜುಳಾ ಶೆಟ್ಟಿ ಹೇಳಿದರು.14-1

ಪೊಳಲಿಗೆ ಸಮೀಪದ ಅಡ್ಡೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬೆನಕ ಮಠದಲ್ಲಿ ಆಯೋಜಿಸಿದ 32ನೇ ವರ್ಷದ ಗಣೇಶೋತ್ಸವ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಧರ್ಮ ಎಂಬ ಪದಕ್ಕೆ ನಾವು ಬದುಕುವ ರೀತಿನೀತಿ, ನಂಬಿಕೆ, ಆಚರಣೆ, ಆರಾಧನೆಯು ಒಳಗೊಂಡ ಅರ್ಥ ವಿಸ್ತಾರವಿದೆ. ನಾವು ಧರಿಸಿಕೊಂಡ ಧರ್ಮದಂತೆ ನಮ್ಮನ್ನು ಧರ್ಮ ನಡೆಸುತ್ತದೆ ಎಂದರು.14vpaddoor

ಕಟೀಲು ದೇವಳದ ಅರ್ಚಕ ವೇದಮೂರ್ತಿ ಶ್ರೀ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡುತ್ತ, ಬುದ್ಧಿ ನಮ್ಮ ಮನಸ್ಸಿನ ಅಸಮತೋಲನ ಸಮತೋಲನಕ್ಕೆ ತರುತ್ತದೆ. ಮನಸ್ಸೆಂಬುದು ಹಗ್ಗದಂತೆ. ಹಗ್ಗ ಸಡಿಲ ಬಿಟ್ಟಾಗ ನಮಗೆ ಎಲ್ಲವೂ ಬೇಕೆಂಬ ಆಸೆಯಾಗುತ್ತದೆ. ಯಾರು ಬುದ್ಧಿಯಿಂದ ಮನಸ್ಸೆಂಬ ಹಗ್ಗ ನಿಯಂತ್ರಿಸುತ್ತಾರೋ ಅವರ ಜೀವನ ಸಾರ್ಥಕವಾಗುತ್ತದೆ. ಇದಕ್ಕೆಲ್ಲ ದೇವರ ಬಗ್ಗೆ ಭಕ್ತಿ-ಪ್ರೀತಿ ಇರಬೇಕು ಎಂದರು. ಬೆನಕ ಮಠಕ್ಕೆ ಆಗಮಿಸಿದ ಶಾಸಕ ಡಾ. ಭರತ್ ಶೆಟ್ಟಿ ದೇವರ ಪ್ರಸಾದ ಸ್ವೀಕರಿಸಿದರು.14-2
ವೇದಿಕೆಯಲ್ಲಿ ಗುರುಪುರ ವ್ಯ.ಸೇ. ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್ ಶೆಟ್ಟಿ, ಉದ್ಯಮಿ ಎ.ಕೆ.ಹನೀಫ್, ಸುಂದರ ಬಲ್ಚಾಡ ನಂದ್ಯ,ಸುಬ್ಬಯ ಬಂಡಾರಿ, ಭೋಜ ಸುವರ್ಣ ಪೊನ್ನೆಲ ಉಪಸ್ಥಿತರಿದ್ದರು. ಪುಟಾಣಿ ತೀರ್ಥ ಪೊಳಲಿ ನಿರೂಪಿಸಿ ಪ್ರೇಮಕೃಷ್ಣ ಪೊನ್ನೆಲ ಸ್ವಾಗತಿಸಿ ಸುಭಾಚ್ಚಂದ್ರ ವಂದಿಸಿದರು.

By Suddi9

Leave a Reply

Your email address will not be published. Required fields are marked *