ಮಾಣಿ: ಬಾಲವಿಕಾಸ ಟ್ರಸ್ಟ್ನ ಆಡಳಿತಕ್ಕೆ ಒಳಪಟ್ಟ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ವರ್ಗ ಮತ್ತು ಆಡಳಿತ ಮಂಡಳಿಯಿಂದ ಸಂಗ್ರಹಿಸಲ್ಪಟ್ಟ ರೂ.62000/-ವನ್ನು ಆಡಳಿತ ಮಂಡಳಿಯ ಉಪಾಧ್ಯಕ್ಷ ಅಪ್ರಾಯ ಪೈ, ಕಾರ್ಯದರ್ಶಿ ಕೆ.ನಾರಾಯಣ ಶೆಟ್ಟಿ ಕೊಂಬಿಲ ,ಸಂಚಾಲಕ ಜೆ.ಪ್ರಹ್ಲಾದ್ ಶೆಟ್ಟಿಯವರು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ದೇಣಿಗೆಯನ್ನು ಬ್ಯಾಂಕ್ ಹುಂಡಿಯ ಮೂಲಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಹಸ್ತಾಂತರಿಸಿದರು.

