ವಾಮಂಜೂರು: ಚರ್ಚಿನ ಕ್ರೈಸ್ತ ಬಾಂದವರು ‘ಮೊಂತಿ ಫೆಸ್ತ್’ ‘ತೆನೆ ಹಬ್ಬ’, ‘ಮರಿಯಮ್ಮ ಮಾತೆಯ ಹುಟ್ಟು ಹಬ್ಬವನ್ನು ಶನಿವಾರು ಭಕ್ತಿ ಶೃದ್ದೆಯಿಂದ ಆಚರಿಸಲಾಯಿತು. ಮುಂಜಾನೆ 7.30 ಗಂಟೆಗೆ ವಾಮಂಜೂರು ಪೇಟೆಯಲ್ಲಿ ಭಕ್ತಾದಿಗಳು ಪ್ರಥಮ ತೆನೆ, ಫಲಪುಷ್ಪಗಳನ್ನು ಸಂಗ್ರಹಿಸಿ ಪ್ರಾರ್ಥನಾ ವಿದಿಯಲ್ಲಿ ಪಾಲ್ಗೊಂಡರು. ಚರ್ಚಿನ ಪ್ರದಾನ ಗುರುಗಳು ವಂದನೀಯ ಸಿಪ್ರಿಯಾನ್ ಪಿಂಟೊ ಪ್ರಾರ್ಥನಾ ವಿಧಿವಿಧನಗಳೊಂದಿಗೆ ‘ತೆನೆ’ ಹಬ್ಬ ಆಚರಿಸಿದರು.8vp monthi fest

ಮಕ್ಕಳು ಮರಿಯಮ್ಮ ಮಾತೆಗೆ ಹೂಗಳನ್ನು ಅರ್ಪಿಸಿದರು. ಬಳಿಕ ಧರ್ಮಗುರುಗಳು, ವೇದಿಕೆ ಸೇವಕರು, ಧರ್ಮಭಗಿನಿಯರು ಮತ್ತು ಭಕ್ತಾದಿಗಳು ವಾದ್ಯ ಮೇಳದೊಂದಿಗೆ ಸ್ತೋತ್ರ ಗೀತೆಗಳನ್ನು ಹಾಡಿ ಚರ್ಚಿಗೆ ಮೆರವಣಿಗೆಯಲ್ಲಿ ಆಗಮಿಸಿದರು.
ಚರ್ಚಿನಲ್ಲಿ ವಂದನೀಯ ಗುರು ಅನಿಲ್ ಲೋಬೋ ಅವರು ಪವಿತ್ರ ದಿವ್ಯಬಲಿಪೂಜೆಯನ್ನು ನೆರವೇರಿಸಿದರು ಮತ್ತು ಮಾತೆ ಮರಿಯಮ್ಮನವರ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಲು ಭಕ್ತಾದಿಗಳಿಗೆ ಕರೆ ನೀಡಿ ಮಾತೆಮರಿಯಮ್ಮನವರು ಸದಾ ನಮ್ಮನ್ನು ಹರಸಲಿ ಎಂದು ಪ್ರಾರ್ಥಿಸಿದರು. ಹಿರಿಯ ಗುರುಗಳು ವಂದನೀಯ ಜೋನ್ ಫೆರ್ನಾಂಡಿಸ್ ಮತ್ತು ಚರ್ಚಿನ ಪ್ರದಾನ ಗುರುಗಳು ದಿವ್ಯಬಲಿಪೂಜೆಯಲ್ಲಿ ಪಾಲ್ಗೊಂಡರು.8vpmonth fest2
ದಿವ್ಯಪೂಜೆಯ ಬಳಿಕ 26 ವಾರ್ಡಿನ ಗುರಿಕಾರರಿಗೆ ಧರ್ಮಗುರುಗಳು ಆಶೀರ್ವದಿತ ತೆನೆಗಳನ್ನು ನೀಡಿದರು. ಗುರಿಕಾರರು ನೆರೆದ ಭಕ್ತಾದಿಗಳಿಗೆ ಹೊಸ ತೆನೆಯನ್ನು ವಿತರಿಸಿದರು. ದಿವ್ಯಪೂಜೆಯ ಬಳಿಕ ಭಕ್ತಾದಿಗಳಿಗೆ ಲಘು ಉಪಹಾರ ಮತ್ತು ಕಬ್ಬು ವಿತರಿಸಲಾಯಿತು.
‘ಮೊಂತಿ ಫೆಸ್ತ್’ ಕುಟುಂಬದ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಅಂದು ಕುಟುಂಬದ ಸದಸ್ಯರು ಜೊಗೆ ಸೇರಿ ಆಶೀರ್ವದಿತ ಹೊಸ ತೆನೆಯನ್ನು ಹಾಲು/ಪಾಯಸದಲ್ಲಿ ಬೆರೆಸಿ ಸೇವಿಸುವರು. ಬಳಿಕ ಸಸ್ಯಹಾರಿ ಸಹಭೋಜನವನ್ನು ಸ್ವೀಕರಿಸುವರು.8vp monthi3
ಹಬ್ಬದ ಪ್ರಯುಕ್ತ ‘ನವದಿನ’ ಗಳ ‘ನೊವೆನಾ’ ನಡೆಸಲಾಯಿತು. ಮಕ್ಕಳು ಮತ್ತು ಭಕ್ತಾದಿಗಳು 9 ದಿನ ದಿವ್ಯಬಲಿಪೂಜೆಯಲ್ಲಿ ಪಾಲ್ಗೊಂಡು ಮಾತೆಮರಿಯಮ್ಮನವರ ಹುಟ್ಟುಹಬ್ಬಕ್ಕೆ ಆದ್ಯಾತ್ಮಿಕ ತಯಾರಿಯನ್ನು ಮಾಡಿದರು. ಮಕ್ಕಳು ಪ್ರತಿ ದಿನ ಮಾತೆಗೆ ಹೂಗಳನ್ನು ಅರ್ಪಿಸಿದರು.
ವಾಮಂಜೂರು ವಾಳೆಯ ಗುರಿಕಾರ ಮತ್ತು ಸದಸ್ಯರು ಹಬ್ಬದ ಮೇಲುಸ್ತುವಾರಿಯನ್ನು ನೋಡಿಕೊಂಡರು. ಕಥೊಲಿಕ್ ಸಭಾ ವಾಮಂಜೂರು ಘಟಕದ ಅದ್ಯಕ್ಷರು ಮತ್ತು ಸದಸ್ಯರು ಹೊಸ ತೆನೆಗಳನ್ನು ಸಂಗ್ರಹಿಸಿದರು. ಹಬ್ಬದ ಪ್ರಯುಕ್ತ ಬಡ ಕುಟುಂಬಗಳಿಗೆ ದವಸದಾನ್ಯಗಳನ್ನು ನೀಡಿದರು.

8vpmonthi fest 1
ಚರ್ಚ್ ಪಾಲನಾ ಸಮಿತಿಯ ಉಪಾದ್ಯಕ್ಷ ಸುನಿಲ್ ಪಿಂಟೊ ಮತ್ತು ಕಾರ್ಯದರ್ಶಿ ರೋಹನ್ ಪಿರೇರಾ ಸಹಕರಿಸಿದರು.

By suddi9

Leave a Reply

Your email address will not be published. Required fields are marked *