Published On: Mon, Sep 3rd, 2018

ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಮುಖ್ಯ: ಎಂ ಬಿ ಸದಾಶಿವ

ಸುಬ್ರಹ್ಮಣ್ಯ: ಆರೋಗ್ಯ ಪೂರ್ಣ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಮಾಧ್ಯಮ ಜವಾಬ್ದಾರಿ ಹೆಚ್ಚಿನದು. ಇದನ್ನು ಪತ್ರಿಕೆ ಮತ್ತು ಪತ್ರಕರ್ತ ಕಾಪಾಡಿಕೊಳ್ಳಬೇಕಿದೆ. ತಾಂತ್ರಿಕ ಆರ್ಥಿಕ ಸ್ಥಿತಿ ಬದಲಾದರೂ ಆತ್ಮ ಸಾಕ್ಷಿಗೆ ಅನುಗುಣವಾಗಿ ಪತ್ರಕರ್ತ ಮತ್ತು ಪತ್ರಿಕೆ ಕೆಲಸ ಮಾಡಬೇಕಿದೆ. ವಿಶ್ವಾಸ್ವಾರ್ಹತೆ ಕಳೆದುಕೊಂಡ ಪತ್ರಿಕೆ-ಪತ್ರಕರ್ತ ಓದುಗನಿಂದ ತಿರಸ್ಕಾರಕ್ಕೆ ಒಳಪಡುತ್ತಾನೆ. ಪ್ರಜಾಪ್ರಭುತ್ವದಲ್ಲಿ ಸಮೂಹ ಮಾಧ್ಯಮಗಳ ಪಾತ್ರ ದೊಡ್ಡದಿದೆ ಎಂದು ಮಾಜಿ ಜಿಲ್ಲಾ ಲಯನ್ಸ್ ಗವರ್ನರ್ ಎಂ ಬಿ ಸದಾಶಿವ ಹೇಳಿದರು.

patrakartha-padadikari (1)
ಸುಬ್ರಹ್ಮಣ್ಯ ಎಸ್ ಎಸ್ ಪಿಯು ಕಾಲೇಜು ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಶನಿವಾರ ನಡೆದ ಸುಬ್ರಹ್ಮಣ್ಯ ವಲಯ ಪತ್ರಕರ್ತರ ಸಂಘ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮ ಅವರು ಮಾತನಾಡಿದರು.
ದೇಶದಲ್ಲಿ ಪ್ರಸ್ತುತ ಪತ್ರಿಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇವೆರಡರ ಹರಣ ನಡೆಯುತ್ತಿದ್ದು ಇದು ಅಪಾಯಕಾರಿ ಬೆಳವಣಿಗೆ ಎಂದರು. ಪತ್ರಿಕೋದ್ಯಮಕ್ಕೆ ಗ್ರಾಮೀಣ ಪತ್ರಕರ್ತರ ಕೊಡುಗೆ ದೊಡ್ಡದಿದೆ. ಪತ್ರಕರ್ತರು ನಿರ್ಭೀತರಾದರೂ ಸಹಿತ ಸಂವೇದಣಾ ಶೀಲತೆ ಹೊಂದಿರಬೇಕು ಎಂದರು.
ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪತ್ರಕರ್ತ ಜವಾಬ್ದಾರಿ ನಿರ್ವಹಣೆ ಅಷ್ಟು ಸುಲಭದ ಕೆಲಸವಲ್ಲ. ಭಾಷೆ ಬರವಣಿಗೆ ಜತೆಗೆ ಧೈರ್ಯ ಕೂಡ ಬೇಕಾಗುತ್ತದೆ. ಗ್ರಾಮೀಣ ಅದರಲ್ಲೂ ವಿಶೇಷವಾಗಿ ಸುಬ್ರಹ್ಮಣ್ಯ ಪರಿಸರದ ಪತ್ರಕರ್ತರು ಶ್ರಮಜೀವಿಗಳು ಮತ್ತು ಸಮಾಜದ ಕಷ್ಟ-ಸುಖಗಳಲ್ಲೂ ಭಾಗಿಗಳಾಗುತ್ತಾರೆ. ಪತ್ರಕರ್ತರ ಬಳಗವೂ ನಿತ್ಯವೂ ಕ್ರೀಯಶೀಲತೆ ಹೊಂದಿರಲಿ ಎಂದು ಹಾರೈಸಿದರು. ಪ್ರಕಾಶ್ ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ಹರೀಶ್ ಕಾಮತ್, ಎಸ್‍ಎಸ್‍ಪಿಯು ಕಾಲೇಜು ಪ್ರಾಂಶುಪಾಲೆ ಕೆ. ಸಾವಿತ್ರಿ ಶುಭಹಾರೈಸಿದರು.

patrakartha-padadikari (2)
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಪಿಡಿಒ ಯು.ಡಿ ಶೇಖರ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಸಂಘದ ಗೌರವಾಧ್ಯಕ್ಷ, ಪತ್ರಕರ್ತ ಎನ್.ಮಂಜುನಾಥ ರಾವ್ ಪ್ರಸ್ತಾವನೆ ಮಾಡಿದರು, ಪತ್ರಕರ್ತ ರತ್ನಾಕರ ಎಸ್ ಸನ್ಮಾನಿತರ ಪರಿಚಯ ವಾಚಿಸಿದರು. ಪತ್ರಕರ್ತ ಭರತ್ ನೆಕ್ರಾಜೆ ಸ್ವಾಗತಿಸಿ, ಪತ್ರಿಕೊದ್ಯಮ ವಿದ್ಯಾರ್ಥಿ ಹರ್ಷಿತ್ ಪಡ್ರೆ ನಿರೂಪಿಸಿದರು, ಬಾಲಕೃಷ್ಣ ಭೀಮಗುಳಿ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter