Published On: Sun, Sep 2nd, 2018

ಧರ್ಮ ನಿಂತ ನಿರಾಗಬಾರದು : ಡಾ|ಮಾಧವ ಭಟ್

ಸುಳ್ಯ : ನಮ್ಮ ದಿನನಿತ್ಯದ ಆಚರಣೆಯನ್ನೇ ಧರ್ಮ ಎನ್ನಬಹುದು. ಧರ್ಮ ನಿಂತ ನೀರಾಗದೇ, ಬದಲಾವಣೆಗೆ ಒಗ್ಗಿಕೊಳ್ಳಬೇಕು. ಕಾಲಕಾಲಕ್ಕೆ ತನ್ನ ತೆಕ್ಕೆಗೆ ಬರುವುದನ್ನು ಸ್ವೀಕರಿಸಿದಾಗ ಧರ್ಮದ ನೆಲೆ ಗಟ್ಟಿಯಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ನಿವೃತ್ತ ಪಾಚಾರ್ಯ ಡಾ|ಮಾಧವ ಭಟ್ ಹೇಳಿದರು.

aradhana mahothsava

ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದ ಆರಾಧನಾ ಮಹೋತ್ಸವದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಮನ್ವಯಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ಸುಳ್ಯದ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಉಪನ್ಯಾಸಕ ಡಾ| ಎಂ.ಎಂ.ದಯಾಕರ್ ಅವರು ಮಾತನಾಡಿ, ಜಗತ್ತಿನ ಸಂಸ್ಕøತಿಗೆ ಭಾರತೀಯ ಸಂಸ್ಕøತಿಯೇ ತಾಯಿ ಬೇರು. ಶ್ರೀಕೃಷ್ಣ ಉಪಾಧ್ಯಾಯ ಅವರು ಧಾರ್ಮಿಕ ಕಟ್ಟುಪಾಡುಗಳಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಹೇಳಿದರು.
ಪ್ರಕಾಶ್ ಮೂಡಿತ್ತಾಯ ಧಾರ್ಮಿಕ ಸಂವಿಧಾನವೇ ಸಂಪ್ರದಾಯ. ಧಾರ್ಮಿಕ ಆಚರಣೆಗಳಿಗೆ ಒಂದು ಅರ್ಥವಿದೆ ಎಂದರು.
ವಿವೇಕಾನಂದ ಕಾಲೇಜಿನ ಉಪನ್ಯಾಸಕ ರಾಕೇಶ್ ಕಮ್ಮಜೆ ಮಾತನಾಡಿ ಈ ವೇಗದ ಯುಗದಲ್ಲಿ ಈ ಕಾಲಕ್ಕೆ ಪ್ರಸ್ತುತವಾದುದನ್ನು ಮಾತ್ರ ಆಚರಿಸಲು ಸಾಧ್ಯ. ಸಂಪ್ರದಾಯಗಳಲ್ಲಿ ತಿದ್ದುಪಡಿಯಾಗಬೇಕು ಎಂದರು.
ಒಟ್ಟಿನಲ್ಲಿ ಪರಸ್ಪರ ಬೆರೆಯುವಿಕೆ ಮತ್ತು ಮಾನವೀಯ ಸಂಬಂಧಗಳ ಉನ್ನತಿಗೆ ಪೂರಕವಾಗುವಂತೆ ಸಂಪ್ರದಾಯಗಳನ್ನು ಆಚರಿಸಬೇಕು ಎಂಬ ಅಭಿಪ್ರಾಯ ಮೂಡಿಬಂತು.
ಈ ಸಂದರ್ಭದಲ್ಲಿ ಬೃಂದಾವನ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಉಪಸ್ಥಿತರಿದ್ದರು. ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಮೂಡಿತ್ತಾಯ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter