ಹೆಬ್ರಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಾಡಿಜಡ್ಡು ಶಾಲಾ ಬಳಿ ಸುಮಾರು 40 ಪ್ರಾಯದ ಗಂಡಸಿನ ಶವ ಕೊಳೆತು ಪತ್ತೆಯಾಗಿದೆ. ಸ್ಥಳೀಯರು ವಿಪರೀತ ವಾಸನೆ ಕಂಡು ಸ್ಥಳಕ್ಕೆ ಹೋಗುವಾರ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹದ ಬಳಿ ಬ್ಲೂ ಬಣ್ಣದ ಜೀನ್ಸ್ ಪ್ಯಾಂಟ್, ಚೌಕುಳಿ ಬಣ್ಣದ ಅಂಗಿ ಮತ್ತು ಬ್ರೌನ್ ಬಣ್ಣದ ಜರ್ಕಿನ್ ದೊರೆತಿದೆ. ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
