ಬಂಟ್ವಾಳ: ಬಂಟ್ವಾಳ ತಾಲ್ಲೂಕುಮಟ್ಟದ ತ್ರೋಬಾಲ್ ಹಾಗೂ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾಗಿರುವ ಸುಜೀರ್ ಪ್ರೌಢ ಶಾಲೆಯ ತ್ರೋಬಾಲ್ ಹಾಗೂ ಕಬ್ಬಡಿ ಕ್ರೀಡಾಪಟುಗಳಿಗೆ ಸುಜೀರ್ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಟುಡೇ ಫೌಂಡೇಶನ್ ಫರಂಗಿಪೇಟೆ ಇದರ ಎಫ್ ಉಮ್ಮರ್ ಫಾರೂಕ್ ರವರ ಸೂಚನೆಯಂತೆ ಹಾಗೂ ಅವರ ನೇತೃತ್ವದಲ್ಲಿ ಶಾಲಾ ಸಭಾಂಗಣದಲ್ಲಿ ಶನಿವಾರ ಸಮವಸ್ತ್ರ ( ಜರ್ಸಿ ) ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

jercy distribution (1)

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಶಾಲಾ ಕ್ರೀಡಾಪಟುಗಳು ಸಮವಸ್ತ್ರ ಧರಿಸದೆ ಕ್ರೀಡೆಯಲ್ಲಿ ಭಾಗವಹಿಸಬಾರದು ಎಂಬ ಉದ್ದೇಶವಿತ್ತು. ಅದಕ್ಕಾಗಿ ಈ ಸಮವಸ್ತ್ರವನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

jercy distribution (3)
ಟುಡೇ ಫೌಂಡೇಶನ್ ಫರಂಗಿಪೇಟೆ ಇದರ ಸದಸ್ಯರಾದ ರಪೀಕ್ ಪೇರಿಮಾರ್ ಹಾಗೂ ದಿರ್ಶಾದ್ ಪೇರಿಮಾರ್ ರವರು ಸಮವಸ್ತ್ರ ಸಂಗ್ರಹಿಸಿದರು. ಅಲ್ಲದೇ ಇಂತ್ತಿಯಾಝ್ ಅಲ್ಫಾ ತುಂಬೆ, ಅಸೀಫ್ ಇಕ್ಬಾಲ್, ಬದ್ರುದ್ದೀನ್ ದಮಾಮ್ , ಅರೀಫ್ ಮಾರಿಪಳ್ಳ, ಇ ಕೆ ರವೂಫ್ ಸೌದಿ ಅರೇಬಿಯಾ, ರಿಯಾಝ್ ಕುಂಪನಮಜಲ್, ಇಸ್ಮಾಯಿಲ್ ಮಜಪೆ ರವರು ಸಹಕರಿಸಿದರು.

jercy distribution (4)
ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹಾಗೂ ಮಾಜಿ ಉಪಾಧ್ಯಕ್ಷ ಹಾಶೀರ್ ಪೇರಿಮಾರ್ ರವರು 30 ಕಬ್ಬಡಿ ಹಾಗೂ ತ್ರೋಬಾಲ್ ಕ್ರೀಡಾಪಟುಗಳಿಗೆ ಉಚಿತ ಸಮವಸ್ತ್ರ ವಿತರಿಸಿದರು.

jercy distribution (2)

ಈ ಕಾರ್ಯಕ್ರಮದಲ್ಲಿ ಪುದು ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಸುಜೀರ್, ರಾಯಲ್ ಕಿಂಗ್ಸ್ ಕ್ರಿಕೆಟರ್ಸ್ ನ ಫಯಾಜ್, ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ರವರು ಉಪಸ್ಥಿತರಿದ್ದರು. ಮಹಮ್ಮದ್ ಬಿ ತುಂಬೆ ಕಾರ್ಯಕ್ರಮವನ್ನು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *