ಬಂಟ್ವಾಳ : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ 41ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು.

shri raktheshweari (2)
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸರಕಾರಿ ಪದವಿಪೂರ್ವ ಕಾಲೇಜು ಪ್ರಾದ್ಯಾಪಕಿ ಸುಜಾತಾ ರವಿಶಂಕರ್ ಮಾತನಾಡಿ, ಹಿರಿಯರು ಹಬ್ಬದ ಆಚರಣೆಯ ನೆಪದಲ್ಲಿ ಸಮಾಜದ ಸಂಘಟನೆ ಮಾಡಿದರು. ಅವರು ಹಾಕಿಕೊಟ್ಟ ಮಾರ್ಗದರ್ಶನದಂತೆ ನಾವು ಮುಂದುವರಿಬೇಕು. ಶ್ರೀ ಕೃಷ್ಣನ ಮಾದರಿಯನ್ನು ನಾವು ಅನುಸರಿಸಬೇಕಾಗಿದೆ ಎಂದು ಹೇಳದರು.
ಇದೇ ವೇಳೆಗೆ ಸತತ 7ನೇ ಬಾರಿಗೆ ಪುರಸಭೆಗೆ ಆಯ್ಕೆಯಾದ ಎ.ಗೋವಿಂದ ಪ್ರಭು ರವರನ್ನು ಅಧ್ಯಕ್ಷ ಎಂ.ಸತೀಶ್ ಭಂಡಾರಿ ಸನ್ಮಾನಿಸಿದರು.
ಶ್ರೀ ಕೃಷ್ಣನ ವೇಷ ಹಾಕಿ ವೇದಿಕೆಗೆ ಕರೆತಂದಾಗ ವೇದಿಕೆಯ ಭಯ ನಿವಾರಣೆಯಾಗುತ್ತದೆ. ಶ್ರೀ ಕೃಷ್ಣ ಆದರ್ಶ ನಮ್ಮದಾಗಲಿ ಎಂದು ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

shri raktheshweari (1)
ಈ ಸಂದರ್ಭದಲ್ಲಿ ಸುರೇಶ್ ಕುಮಾರ್ ಕೈಕಂಬ, ಲೋಕನಾಥ ಶೆಟ್ಟಿ, ರಾಜೇಶ್ ಕುಮಾರ್ ಬಿ.ಸಿ.ರೋಡ್, ಬಿ.ಇಂದ್ರೇಶ್, ರಮೇಶ್ ಶೆಣೈ, ಪುಷ್ಪರಾಜ ಶೆಟ್ಟಿ, ಲಿಂಗಪ್ಪ ಮಾಸ್ತರ್, ಶಿವಕುಮಾರ್ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ರಾಜೇಶ್ ಬಿ. ಸ್ವಾಗತಿಸಿದರು. ಇಂದ್ರೇಶ್ ವಂದಿಸಿ,ಶ್ರೀಧರ ಶೆಣೈ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *