ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಪೊರ್ಕೊಡಿ ಎಂಬಲ್ಲಿಯ ಅವಿವಾಹಿತ ಯುವಕನೊರ್ವ ಕಳೆದ ಮೂರು ದಿನಗಳಿಂದ ನಾಪತೆಯಾಗಿದ್ದಾನೆ.ಪೊರ್ಕೊಡಿ ನಾರಾಯಣ ಗುರು ನಗರದ ನಿವಾಸಿ ಕೇಶವ ಪೂಜಾರಿ ಎಂಬವರ ಪುತ್ರ 29ವರ್ಷದ ಯತೀಶ್ ಎಂಬಾತ ನಾಪತ್ತೆಯಾದ ಯುವಕ. ಈತ ಮುಂಬೈಯಲ್ಲಿ ಉದ್ಯೋಗದಲ್ಲಿದ್ದು ಕಳೆದ ಗುರುವಾರ ಊರಿಗೆ ಬಂದಿದ್ದ.ಶುಕ್ರವಾರ ದಿನನ್ಯಾಯಾಲದಲ್ಲಿ ಕೇಸೊಂದರ ವಿಚಾರಣೆ ಇದ್ದುದರಿಂದ ವಿಚಾರಣೆಗೆ ಹಾಜರಾಗಲು ಊರಿಗೆ ಬಂದಿದ್ದ.
ನ್ಯಾಯಲಯಕ್ಕೆ ಹೋಗಬೇಕಿದ್ದ ತನ್ನ ಹಿತರ ಸ್ನೇಹಿತರೊಂದಿಗೆ ಶುಕ್ರವಾರ ಬೆಳಗ್ಗೆ ಬಜಪೆ ಪೇಟೆಯಲ್ಲಿ ಮಾತನಾಡಿ ನೀವೂ ಮುಂದೆ ಹೋಗಿ ನಾನು ನಂತರ ಬರುತ್ತೆನೆಂದು ಹೇಳಿದ್ದ. ನಂತರ ಈತ ಕೆಲವು ಸ್ನೇಹಿತರಿಗೆ ಹಾಗೂ ಸಂಭಂಧಿಕರಿಗೆ ಕರೆ ಮಾಡಿ ನಾನು ಯಾರಿಗೂ ತಪ್ಪು ಮಾಡಿಲ್ಲ ತನ್ನಿಂದ ಏನಾದರೂ ತೊಂದರೆ ಹಾಗಿದ್ದರೆ ನನ್ನನ್ನು ಕ್ಷಮಿಸಿ ಎಂದು ವಿನಂತಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಈತ ಕೆಲಸ ಮಾಡುತ್ತಿದ ಕಂಪೆನಿಗೆ ಹಾಗೂಸಂಭಂಧಿಕರಲ್ಲಿ ಈತನ ಬಗ್ಗೆ ವಿಚಾರಿಸಿದರೂಸುಳಿವುಪತ್ತಯಾಗಿಲ್ಲ.ಈ ಬಗ್ಗೆ ಈತನತಮ್ಮ ಭಾಸ್ಕರೆಂಬವರು ಬಜಪೆ ಠಾಣೆಗೆ ದೂರು ನಿಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
