ಬಡಗಬೆಳ್ಳೂರು: ಶ್ರೀ ಕಾವೇಶ್ವರ ಭಕ್ತವೃಂದಬಟ್ಟಾಜೆ ಇದರ 12ನೇ ವರ್ಷದ ಮೊಸರು ಕುಡಿಕೆ ಉತ್ಸವವುಸೆ.3ರಂದು ಸೋಮವಾರ ಬೆಳಗ್ಗೆ ಗಂಟೆ 10ರಿಂದ ರಾತ್ರಿ 8.ಗಂಟೆಯವರೆಗೆ ಶ್ರೀ ಕಾವೇಶ್ವರ ಭಕ್ತವೃಂದದ ಆಶ್ರಯದಲ್ಲಿ ನಡೆಯಲಿದೆ.ಕೊಪ್ಪಲ ಉಮಾನಾಥ ಸಪಲ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಕೊಳಕೆ ದರ್ಖಾಸು ಕೃಷ್ಣಪ್ಪ ಡ್ರೈವರ್ ವಹಿಸಲಿದ್ದಾರೆ. ಕೂರಿಯಾಳ ಗ್ರಾ.ಪಂ.ಸದಸ್ಯ ಸುಧಾಕರ ಶೆಟ್ಟಿ ಭಾಗಂತ್ರಬೈಲು ಹಾಗೂ ಸಮಾರೋಪ ಸಮಾರಂಭದಲ್ಲಿ ಸಂತೋಷ್ ಬಿ.ಕುಕ್ಕಾಜೆ, ತಾಲೂಕು ಪಂಚಾಯತಿ ಸದಸ್ಯ ಯಶವಂತ ಪೊಳಲಿ,ಗುತ್ತಿಗೆದಾರ ಯಶೋಧರ ಪೊಳಲಿ ಕಲ್ಕುಟ, ಬಳ್ಳಿ ಮನೆ ಕೂರಿಯಾಳ ಪ್ರಸನ್ನಭಂಡಾರಿ,ಮಾ.ತಾ. ಪಂ.ಸದಸ್ಯ ದೇವಪ್ಪ ಪೂಜಾರಿ ಬಾಳಿಕೆ,ಧ.ಗ್ರಾ.ಯೋಜನೆಯ ಸೇವಾ ಪ್ರತಿನಿದಿ ರೂಪಾನಾರಾಯಣ್ ನಾೈಕ್ ಭಾಗವಹಿಸಲಿದ್ದಾರೆ.
ಆಟೋಟ ಸ್ಪರ್ಧೆಗಳು :
ಮಕ್ಕಳಿಗೆ ಛದ್ಮವೇಷ ಸ್ಪರ್ಧೆಯೊಂದಿಗೆ ನಾನಾ ಆಟೋಟ ಸ್ಪರ್ಧೆಗಳು.
ಮಹಿಳೆಯರಿಗೆ: ಮಡಕೆ ಒಡೆಯುವುದು., ಹಗ್ಗಜಗ್ಗಾಟ,ಛದ್ಮವೇಷ.
ಶ್ರೀ ಕಾವೇಶ್ವರ ಭಕ್ತವೃಂದದ ಸದಸ್ಯರಿಂದ ಹಾಸ್ಯೋತ್ಸವ-“ಮೊಬೈಲ್ ಮರ್ಲೆ”ಹಾಸ್ಯೋತ್ಸವ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
