ಪೊಳಲಿ: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆಶ್ರಮದಲ್ಲಿ ಮೂರು ದಿನಗಳ ಕಾರ್ಯಕ್ರಮಗಳ ಪ್ರಥಮ ಹಂತವಾಗಿ ಅಖಂಡ ಭಜನಾ ಸಂಕೀರ್ತನೆಗೆ ಶನಿವಾರ ಬೆಳಗ್ಗೆ ಮಂಗಳೂರು ರಾಮಕೃಷ್ಣಮಠದ ಅಧ್ಯಕ್ಷ ಪೂಜ್ಯ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಚಾಲನೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಭಜನಾ ಮಂಡಳಿಗಳಿಂದ ನಿರಂತರ 24 ಗಂಟೆಗಳ ಭಜನಾ ಸಂಕೀರ್ತನೆ ನಡೆಯಲಿದೆ. ಭಾನುವಾರ ಬೆಳಗ್ಗೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ತುಳಸಿ ಅರ್ಚನೆ ಶ್ರೀಕೃಷ್ಣನಿಗೆ ಅಭಿಷೇಕ. ಮಹಾಮಂಗಳಾರತಿ. ಸಾರ್ವಜನಿಕ ಅನ್ನ ಸಂತರ್ಪಣೆ. ಮಕ್ಕಳ ಛದ್ಮವೇಷಸ್ಪರ್ಧೆ ಸೋಮವಾರ ಮೊಸರು ಕುಡಿಕೆ ಉತ್ಸವ ಶ್ರೀ ಕೃಷ್ಣ ಲೀಲೋತ್ಸವ ನಡೆಯಲಿದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು. ಪೊಳಲಿ ರಾಜರಾಜೇಶ್ವರೀ ಭಜನಾಮಂಡಳಿ ಮತ್ತು ರಾಜರಾಜೇಶ್ವರೀ ಮಹಿಳಾ ಮಂಡಳಿ ಯವರಿಂದ ಭಜನೆ ಪ್ರಾರಂಭಗೊಂಡಿತು.


