ಕಲ್ಲಡ್ಕ: `ನಮ್ಮ ನಲಿಕೆ ಸ್ವಜಾತಿ ಬಾಂಧವರು ಯಾವುದೇ ರೀತಿಯ ತೊಂದರೆ, ಅನ್ಯಾಯಕ್ಕೆ ಒಳಗಾದರೆ ಅದರ ವಿರುದ್ಧ ಸಂಘಟನೆಯ ಸದಸ್ಯರು ಒಟ್ಟಾಗಿ ನಿಂತು ಹೋರಾಡಬೇಕು. ಅಂತೆಯೇ ನಮ್ಮ ಯುವಕರು ದುಸ್ಚಟಗಳಿಗೆ ಬಲಿಯಾಗಬಾರದು’ ಎಂದು ಬಂಟ್ವಾಳ ತಾಲೂಕು ನಲಿಕೆ ಸೇವಾ ಸಮಿತಿ ಅಧ್ಯಕ್ಷ ರಾಘವೇಂದ್ರ ಸುರುಳಿ ಮೂಲೆ ಹೇಳಿದರು.

sanmana (1)

ಕಲ್ಲಡ್ಕ ಸರಕಾರಿ ಶಾಲೆಯಲ್ಲಿ ನಡೆದ ನಲಿಕೆ ಸೇವಾ ಸಮಿತಿ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.
ಮುಖ್ಯ ಅತಿಥಿಗಳಾಗಿ ಬಿಜೆಪಿ ಎಸ್ ಸಿ ಮೋರ್ಚಾದ ಉಪಾಧ್ಯಕ್ಷ ಲೋಕಯ್ಯ ಪೂರ್ಲಿಪ್ಪಾಡಿ ಮತ್ತು ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಾ ಪದ್ಮನಾಭ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಹಾದೇವಿ ಮಕ್ಕಳ ಸಂಘದ ಕಾರ್ಯದರ್ಶಿ ಚೇತನಾ ಇವರನ್ನು ಸನ್ಮಾನಿಸಲಾಯಿತು.

sanmana (2)
ಈ ಸಂದರ್ಭದಲ್ಲಿ ಯುವ ಶಕ್ತಿ ಫ್ರೆಂಡ್ಸ್ ಚಿಕ್ಕಿದಕಾಡು ಇದರ ಅಧ್ಯಕ್ಷ ರಮಾನಂದ, ನಲಿಕೆ ಸೇವಾ ಸಮಿತಿ ಉಪಾಧ್ಯಕ್ಷ ನವೀನ್ ಕಡೆಶಿವಾಲಯ, ವಾಸು, ದಮಯಂತಿ ಚಿಕ್ಕಿದಕಾಡು ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದಯಾನಂದ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ನವೀನ್ ಕಾರ್ಯಕ್ರಮ ನಿರೂಪಿಸಿದರು. ವಸಂತ ಪೂರ್ಲುಪ್ಪಾಡಿ ವಂದಿಸಿದರು.

By suddi9

Leave a Reply

Your email address will not be published. Required fields are marked *