ಸುದ್ದಿ9 ಪೊಳಲಿ ಶ್ರೀರಾಜರಾಜೇಶ್ವರೀ ದೇವಾಸ್ಥಾನದಲ್ಲಿ ಸೆ4ರಂದು ಬೆಳಿಗ್ಗೆ 9.30ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾವಿರಸೀಮೆಯ ಭಕ್ತರ ಸಮಕ್ಷಮದಲ್ಲಿ ತೆನೆಹಬ್ಬವನ್ನು ಆಚರಿಸಲಾಯಿತು. ಪೊಳಲಿಯಲ್ಲಿ ತೆನೆಹಬ್ಬ ಆಚರಿಸಿದ ನಂತರ ಪೊಳಲಿ ಸುತ್ತಮುತ್ತಲಿನ ಊರುಗಳಲ್ಲಿ ತೆನೆಹಬ್ಬ ಆಚರಿಸಲಾಗುತ್ತದೆ. ಪೊಳಲಿ ರಾಜರಾಜೇಶ್ವರಿ ದೇವಾಸ್ಥಾನದ ಅರ್ಚಕರು ಮತ್ತು ಮೊಕ್ತೇಸರರು ಉಪಸ್ಥಿತರಿದ್ದರು.



