ಶಿರ್ತಾಡಿ: ಶಿರ್ತಾಡಿಯ ಸ್ನೇಹ ವುಡ್ ಇಂಡಸ್ಟ್ರೀಸ್ ವತಿಯಿಂದ ಸಿಡಿಲಿನ ಆಘಾತಕ್ಕೊಳಗಾಗಿ ಮನೆ ಕಳೆದುಕೊಂಡ ಕಾಶಿಪಟ್ನ ನಿವಾಸಿ ಪಾರ್ವತಿಯವರಿಗೆ ಹೊಸ ಮನೆ ನಿರ್ಮಾಣಕ್ಕಾಗಿ ಸಹಾಯಾರ್ಥವಾಗಿ 43 ಸಾವಿರ ವೆಚ್ಚದ ಮರದ ಮುಖ್ಯದ್ವಾರ, ಬಾಗಿಲು ಹಾಗೂ ಕಿಟಕಿ ಬಾಗಿಲುಗಳನ್ನು ಆ.27 ಸೋಮವಾರದಂದು ಹಸ್ತಾಂತರಿಸಲಾಯಿತು.
ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ವ್ಯಾಟ್ಸಪ್ ಗ್ರೂಪ್ನ ಮಾಸಿಕ ಸಭೆಯ ತೀರ್ಮಾನದಂತೆ ತಂಡದ 16ನೇ ಯೋಜನೆಯಾಗಿ ಸಂತ್ರಸ್ತ ಪಾರ್ವತಿಯವರಿಗೆ ಸಹಾಯ ನೀಡಲಾಯಿತು.
ವ್ಯಾಟ್ಸಪ್ ಗ್ರೂಪ್ನ ಕಾರ್ಯದರ್ಶಿ, ಸ್ನೇಹ ವುಡ್ ಇಂಡಸ್ಟ್ರೀಸ್ನ ಮಾಲಕ ಸಂತೋಷ್ ಕಟ್ಟೆ, ಸದಸ್ಯರಾದ ದೇವದಾಸ ಸಾಲಿಯಾನ್, ಶಶಿಧರ ದೇವಾಡಿಗ ಗೇಂದೊಟ್ಟು ಮತ್ತಿತರರು ಈ ಸಂದರ್ಭದಲ್ಲಿದ್ದರು.

