ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ಪದ್ಮಭೂಷಣ ರಾಜಶ್ರೀ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ “ಶುದ್ಧ ನೀರು ಆರೋಗ್ಯದ ತವರು” ಎಂಬ ಆಶಯದೊಂದಿಗೆ ಮೂಡುಬಿದಿರೆ ಜೈನ್ ಮಿಲನ್ ವತಿಯಿಂದ ಸರಕಾರಿ ಫ್ರೌಢ ಶಾಲೆ ಮಿಜಾರಿನ ಮಕ್ಕಳಿಗೆ ಅನುಕೂಲವಾಗುವಂತೆ ವಾಟರ್ ಫಿಲ್ಟರನ್ನು ಶಾಲಾ ಮುಖ್ಯೋಪಾಧ್ಯರಾದ ನವೀನ್ಚಂದ್ರ ಅಂಬೂರಿಯವರಿಗೆ ಆ.27 ಸೋಮವಾರದಂದು ವಲಯ ಉಪಾಧ್ಯಕ್ಷರಾದ ಪುಷ್ಪರಾಜ್ ಜೈನ್, ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವಲಯ ನಿರ್ದೇಶಕರಾದ ಜಯರಾಜ್ ಕಂಬಳಿ, ಮೂಡುಬಿದಿರೆ ಅರಮನೆಯ ಕುಲದೀಪ್ ಎಂ., ಕಾರ್ಯದರ್ಶಿಗಳಾದ ರಶ್ಮಿತ ಯುವರಾಜ್ ಜೈನ್, ಖಜಾಂಜಿಯವರಾದ ದಿವ್ಯ ವೀರೆಂದ್ರ ಹಾಗೂ ಪುಷ್ಪರಾಜ್, ಪ್ರವೀಣ್, ಪ್ರಸನ್ನ ಉಪಸ್ಥಿತರಿದ್ದರು.

