ಕೈಕಂಬ: ಗ್ರಾಮೀಣ ಪ್ರದೇಶಗಳಲ್ಲಿ ಯಕ್ಷಗಾನ ಸಪ್ತಾಹದಂತಹಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುವುದು ಸಾಮಾನ್ಯ ಕೆಲಸವಲ್ಲ. ಹಿರಿಯ ಕಲಾವಿದರು ಹಾಕಿಕೊಟ್ಟ ಹೆಜ್ಜೆಯನ್ನು ಈಗಿನ ಯುವ ಕಲಾವಿದರು ಶ್ರದ್ಧೆಯಿಂದ ನಡೆಸಿಕೊಂಡು ಹೋಗುತ್ತಿರುವುದು ಬಹಳ ಸಂತೋಷದ ವಿಷಯ ಎಂದು ರಮೇಶ್ ಆಚಾರ್ಯ ನಾರಳ ಹೇಳಿದರು. ಅವರು, ಶ್ರೀರಾಮಾಂಜನೇಯ ಕೃಪಾಪೋಷಿತ ಯಕ್ಷಗಾನ ಮಂಡಳಿ ಮಳಲಿ ಇದರ ಆಶ್ರಯದಲ್ಲಿ ಮಳಲಿ ಶಾಲಾ ಸಭಾಂಗಣದಲ್ಲಿ ನಡೆದ ಯಕ್ಷಗಾನ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ಉದ್ಯಮಿ ರವಿರಾಜ್ ಸಾಮಾನಿ ಬನತ್ತಡಿ, ಹರೀಶ್ ಭಂಡಾರಿ ನಾರಳ, ಹರೀಶ್ ಪೈ, ಚಂದ್ರಹಾಸ ಶೆಟ್ಟಿ ನಾರಳ, ಪುಷ್ಪರಾಜ ಶೆಟ್ಟಿ ಬನತ್ತಡಿ, ಶೋಹನ್ ಅಥಿಕಾರಿ, ಪಂಚಾಯತ್ ಸದಸ್ಯರಾದ ದಾಮೋದರ ಕುಲಾಲ್, ನೋಣಯ್ಯ ಕೋಟ್ಯಾನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಕುಂದರ್, ಶ್ರೀರಾಮಾಂಜನೇಯ ಭಜನಾ ಮಂದಿರದ ಅಧ್ಯಕ್ಷ ಶ್ರೀನಿಧಿ, ಮಂಡಳಿಯ ಅಧ್ಯಕ್ಷ ರಾಮಚಂದ್ರ ಅತಿಕಾರಿಬೆಟ್ಟು ಮತ್ತು ಸುಧಾಕರ ಟೈಲರ್ ಮಳಲಿ ಉಪಸ್ಥಿತರಿದ್ದರು. ಮಂಡಳಿಯ ಕಾರ್ಯದರ್ಶಿ ಉಮೇಶ್ ಸಂಕೇಶ ಸ್ವಾಗತಿಸಿ ನಿರೂಪಿಸಿದರು. ಭವಾನಿಶಂಕರ್ ವಂದಿಸಿದರು.
