ಪ್ರತಿಯೊಬ್ಬ ಕೃಷಿಕನಲ್ಲಿಯೂ ಸಾಮಾಥ್ರ್ಯಾವೆಂಬುದು ಸುಪ್ತವಾಗಿರುತ್ತದೆ ತಾನು ಸಂಘದಲ್ಲಿ ಸೇರಿ ತನ್ನ ಕೃಷಿ ಹಾಗೂ ಜೀವನ ಮಟ್ಟ ಏರಿಸಲು ಪ್ರಯತ್ನಿಸಿದರೆ ಇತರ ಸಂಘ ಸಂಸ್ಥೆಗಳು ಪಂಚಾಯತ್ ಮತ್ತು ಇಲಾಖೆಗಳು ಖಂಡಿತಾ ಸಹಕಾರ ನೀಡುತ್ತವೆ. ಕೃಷಿ ಮಾಡುವವರು ಯಾವತ್ತು ತಾನು ಅಸಾಹಾಯಕನೆಂದು ಬಾವಿಸದೆ ಸೌಲಭ್ಯಗಳನ್ನು ಬಳಸಿ ಕೃಷಿಯಲ್ಲಿ ಮುಂದುವರಿಯಬೇಕು ಎಂದು ಬಡಗ ಬೆಳ್ಳೂರು ಪಂಚಾಯತ್ ಅದ್ಯಕ್ಷೆ ಜಯಂತಿ ರವರು ಹೇಳಿದರು.

IMG-20180824-WA0022ಅವರು ಆ. 22 ರಂದು ಬಡಗ ಬೆಳ್ಳೂರು ಲಲಿತ ಸಂಜೀವ ಪೂಜಾರಿ ಮನೆ ವಠಾರದಲ್ಲಿ ದಿಶಾ ಸಂಸ್ಥೆ ಮತ್ತು ಸ್ಥಳಿಯ ಶಿವಶತ್ತಿ ಮತ್ತು ಕಾವೇಶ್ವರ ಕೃಷಿಕರ ಸಂಘ ವತಿಯಿಂದ ಏರ್ಪಡಿಸಿದ ಸಾಮಾಥ್ರ್ಯಾ ಅಭಿವ್ಥದ್ದಿ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡುತ್ತಿದ್ದರು. ದಿಶಾ ಸಂಸ್ಥೆಯ ನಿರ್ದೇಶಕಾರಾದ ಸಿಲ್ವೆಸ್ಯರ್ ಡಿ ಸೋಜ ಮಾತನಾಡಿ ಕೃಷಿಕರಲ್ಲಿ ಆತ್ಮವಿಶ್ವಾಸ ತುಂಬಿಸುವ ಕೆಲಸ ಆಗಬೇಕಿದೆ.IMG-20180824-WA0026

ದಿಶಾ ಸಂಸ್ಥೆಯ ಕಾರ್ಯಕರ್ತರು ರೈತರ ಮನೆ ಬೇಟಿ ಮಾಡಿ ಸಂಘಗಳನ್ನು ಮಾಡಿ ಮುಂದುವರಿಯಲು ಮಾರ್ಗದರ್ಶನ ನೀಡುತ್ತವೆ. ಪ್ರಕ್ರಾತಿಕ ಸಂಪನ್ಮೂಲ ಸಂರಕ್ಷಣೆ ಮಾಡುವ ಕೆಲಸ ಮಾದರಿಗಳನ್ನು ಗ್ರಾಮದಲ್ಲಿ ಮಾಡಲು ಇದೆ. IMG-20180824-WA0029ಇದೇ ಸಮಯದಲ್ಲಿ ಸರಕಾರದ ಅಭಿವೃದ್ದಿ ಕಾರ್ಯಕ್ರಮದಲ್ಲಿ ರೈತರು ತೊಡಗಿಸಿಕೊಳ್ಳಬೇಕು. ಗ್ರಾಮಸಭೆ ವಾರ್ಡ್ ಸಭೆಗಳಲ್ಲಿ ಭಾಗವಹಿಸಿ ತಮ್ಮ ಗ್ರಾಮದಲ್ಲಿ ಅಗಬೇಕಾದ ಅಭಿವೃದ್ದಿ ಕಾರ್ಯಕ್ರಮಗಳ ಪಟ್ಟಿ ಮಾಡಬೇಕು ಮತ್ತು ಅನುದಾನ ಸಿಗುವಾಗ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು. ಬಡಗ ಬೆಳ್ಳೂರು ಶಿವಶತ್ತಿ ಕೃಷಿಕರ ಸಂಘ ಮತ್ತು ತೆಂಕ ಬೆಳ್ಳೂರು ಕಾವೇಶ್ವರ ಸಂಘದ ಪದಾದಿಕಾರಿಗಳಾದ ಯೋಗಿಶ್ ಪೂಜಾರಿ, ಮಂಜುಳ ಶೆಟ್ಟಿ ,ಕೃಷ್ಣ ಪ್ರಸಾದ್ ರೈ, ಪ್ರವೀಣ್ ಶೆಟ್ಟಿ, ನಿರಂಜನ ಸೇಮಿತ, ದಿನೇಶ್ ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿ ವಾಲ್ಡರ್ ಮತ್ತು ಕ್ಷೇತ್ರ ಸಂಯೋಜಕರಾದ ರುದೇಶ್ ಪ್ರಾಕ್ರಾತಿಕ ಸಂಪತ್ತು ಸಂರಕ್ಷಣೆಯನ್ನು ಕೃಷಿಕರ ಬಾಗವಹಿಸುವಿಕೆಯ ಮೂಲಕ ಮಾಡುವ ವಿದಾನಗಳ ಬಗ್ಗೆ ಮಾಹಿತಿ ನೀಡಿದರು.

IMG-20180824-WA0028

By suddi9

Leave a Reply

Your email address will not be published. Required fields are marked *