ಗುರುಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಉತ್ಸಾಹದ ಚಿಲುಮೆಯಂತಿದ್ದರೆ ಯಾವುದೇ ಸವಾಲನ್ನು ಸುಲಭವಾಗಿ ಎದುರಿಸಬಹುದು. ಈ ದಿಸೆಯಲ್ಲಿ ಅವರಿಗೆ ಸೂಕ್ತ ಪ್ರೇರಣೆ, ತರಬೇತಿ ನೀಡಿ ಸಜ್ಜುಗೊಳಿಸಬೇಕು. ಪ್ರೇರಣೆ ಎನ್ನುವುದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ಇದರ ಅಗತ್ಯವಿದೆ ಎಂದು ಯುವ ಉಧ್ಯಮಿ ಚಂದ್ರಹಾಸ ಶೆಟ್ಟಿ ನಾರಳ ಹೇಳಿದರು.

ಅವರು ಗುರುಪುರ ಕೈಕಂಬದ ಶೈನ್ ಕೋಚಿಂಗ್ ಸೆಂಟರ್‍ಬಲ್ಲಿ ನಡೆದ `ಮೋಟಿವೇಷನಲ್ ಟಾಕ್ ಫಾರ್ ಸ್ಟುಡೆಂಟ್ಸ್’ ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹೇಶ್ ಶೆಟ್ಟಿ ಅವರು ಸಮಯದ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಹೇಳಿದರು. ಡಾ. ಶೃತಿ ಜೆ. ನಾಯ್ಕ್ ಅವರು ವಿದ್ಯಾರ್ಥಿಗಳಿಗೆ ಕಲಿಕೆಯ ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿಠ್ಠಲ್ ನಾಯ್ಕ್, ಜೇಮ್ಸ್ ಮೇಂಡ ಉಪಸ್ಥಿತರಿದ್ದರು.
ನಿಶಿತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ತಾಂತ್ರಿಕ ವಿಭಾಗದ ಎಲ್ಲಾ ವಿಷಯಗಳ ಬಗ್ಗೆ ತರಬೇತಿಗೆ ಜಯರಾಮ್ ಶೆಟ್ಟಿ ಅವರು ಚಾಲನೆ ನೀಡಿದರು.
ಶೈನ್ ಕೋಚಿಂಗ್ ಸೆಂಟರ್‍ನಲ್ಲಿ ಮೋಟಿವೇಷನಲ್ ಟಾಕ್ ಫಾರ್ ಸ್ಟುಡೆಂಟ್ಸ್‍ಗೆ ಚಾಲನೆ ನೀಡಲಾಯಿತು
