ವಿಟ್ಲ: ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ವತಿಯಿಂದ ಬಾಲಗೋಕುಲ ತರಗತಿ ನಡೆಸುವ ಶಿಕ್ಷಕಿಯರಿಗೆ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಜರಗಿತು.

ಈ ಕಾರ್ಯಕ್ರಮವನ್ನು ಕಾಸರಗೋಡು ತಾಲೂಕು ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಉದ್ಘಾಟಿಸಿದರು. ಕಾರ್ಯದರ್ಶಿ ದೇವದಾಸ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಟ್ಲ ಕ್ಷೇತ್ರ ಸಮಿತಿ ಅಧ್ಯಕ್ಷ ಜಗದೀಶ ಪಾಣೆಮಜಲು ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ಜತೆಕಾರ್ಯದರ್ಶಿ ನಟೇಶ್ ಕುಮಾರ್ ಬೊಳ್ಳೆಚ್ಚಾರು ಮತ್ತು ಉಪಾಧ್ಯಕ್ಷ ರವಿಶಂಕರ್ ಉಪಸ್ಥಿತರಿದ್ದರು. ಮಾರ್ಗದರ್ಶಕ ಮೈತ್ರೇಯಿ ಗುರುಕುಲದ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು ಪ್ರಸ್ತಾವಿಸಿದರು. ಸಂಚಾಲಕ ಪರಮೇಶ್ವರ ಆಚಾರ್ಯ ಮಂಕುಡೆ ನೆಡ್ಯಾಳ ಸ್ವಾಗತಿಸಿ ನಿರೂಪಿಸಿದರು. ವಿಟ್ಲ ನಗರ ಸಂಚಾಲಕ ಕೇಶವ ವಿಟ್ಲ ವಂದಿಸಿದರು.
