ವಿಟ್ಲ: ದಲಿತ್ ಸೇವಾ ಸಮಿತಿಯ ವಿದ್ಯಾರ್ಥಿ ಸಂಘಟನೆಯನ್ನು ಸಮಿತಿ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಮತ್ತು ಕಾರ್ಯದರ್ಶಿ ಚಂದ್ರಶೇಖರ ಯು ಇವರ ನೇತೃತ್ವದಲ್ಲಿ ರಚಿಸಲಾಯಿತು. ಈ ಕಾರ್ಯಕ್ರಮವನ್ನು ವಿಟ್ಲ ಪೋಲೀಸ್ ಠಾಣಾಧಿಕಾರಿ ಎಲ್ಲಪ್ಪ ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ಉದ್ಘಾಟಿಸಿದರು.
ಅಧ್ಯಕ್ಷೆಯಾಗಿ ದಿವ್ಯಶ್ರೀ ಕಲ್ಲಜೇರ, ಉಪಾಧ್ಯಕ್ಷೆ ಶಿವಶ್ರೀ ಸುರುಳಿಮೂಲೆ, ಕಾರ್ಯದರ್ಶಿಯಾಗಿ ಚರಣ್‍ರಾಜ್ ಮತ್ತು ತಿಲಕ್‍ರಾಜ್, ಜತೆಕಾರ್ಯದರ್ಶಿಯಾಗಿ ಮಹೇಶ್ ಮತ್ತು ಮಾಲತಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರತೀಕ್ಷಾ, ರಶ್ಮಿ ಮತ್ತು ಚೈತನ್ಯ, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಶೋಬಿತ್ ವಿ, ಪ್ರಿಯಪಲ್ಲವಿ ಮತ್ತು ಚೇತನ್ ಕುಮಾರ್, ಗೌರವಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಸಂಚಾಲಕರಾಗಿ ಚಂದ್ರಶೇಖರ ಯು ಮತ್ತು ಸುಪ್ರೀತಾ ಪಿಲಿಂಜ, ಸಹ ಸಂಚಾಲಕರಾಗಿ ಗೋಪಾಲ್ ನೇರಳಕಟ್ಟೆ ಮತ್ತು ಮಾಲಾಶ್ರೀ ದರ್ಬೆ, ಸಂಘಟಕರಾಗಿ ಬಿ ಕೆ ಪ್ರಸಾದ್ ಅನಂತಾಡಿ ಮತ್ತು ಪ್ರೇಮ ದಡ್ಡಲತ್ತಡ್ಕ, ಸಲಹೆಗಾರರಾಗಿ ಭಾಸ್ಕರ ವಿಟ್ಲ, ಸುರೇಶ್ ಕುಮಾರ್ ಜಿ ಪೆರುವಾಯಿ, ರವಿಚಂದ್ರ ಪಡುಬೆಟ್ಟು, ಸೋಮಪ್ಪ ಸುರುಳಿಮೂಲೆ, ಮೋಹನದಾಸ್ ಯು, ಸೋಮಪ್ಪ ನಾಯ್ಕ ಮಲ್ಯ ಮತ್ತು ಗೋವಿಂದ ನಾಯ್ಕ ಕುಂಡಡ್ಕ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಉಪಧೀಕ್ಷಕರಾದ ರಿಷಿಕೇಶ್ ಭಗವಾನ್ ಎಸ್, ಉಪನ್ಯಾಸಕ ಭಾಸ್ಕರ್ ವಿಟ್ಲ, ದಲಿತ್ ಸಂಘರ್ಷ ಸಮಿತಿ ಸಂಚಾಲಕ ದೇವಪ್ಪ ಕಾರೆಕ್ಕಾಡು, ಅರಣ್ಯಾಧಿಕಾರಿ ರವಿಚಂದ್ರ ಪಡಬೆಟ್ಟು, ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಕಡಂಬು, ಕನಕಶ್ರೀ ಮೊಗೇರ ಸಂಘಟನೆಯ ಅಧ್ಯಕ್ಷ ಸುರೇಶ್ ಕುಮಾರ್ ಜಿ ಪೆರುವಾಯಿ, ಬಂಟ್ವಾಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ದಡ್ಡಲತ್ತಡ್ಕ ಇವರು ಉಪಸ್ಥಿತರಿದ್ದರು.ಚಂದ್ರಶೇಖರಯು ವಿಟ್ಲ ಸ್ವಾಗತಿಸಿದರು. ಪ್ರಸಾದ್ ಬೊಳ್ಮಾರ್ ನಿರೂಪಿಸಿದರು. ಪ್ರಸಾದ್ ಅನಂತಾಡಿ ವಂದಿಸಿದರು.

